ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇಲ್ಲಿ ಸುಲಭವಾಗಿ ಹರಿವೆ ಸೊಪ್ಪಿನ ಪಲ್ಯ ಮಾಡುವ ವಿಧಾನ ಇದೆ ಒಮ್ಮೆ ಮಾಡಿ ನೋಡಿ.
ಬೇಕಾಗುವ ಸಾಮಗ್ರಿಗಳು: 2 ಕಟ್ಟು – ಹರಿವೆ ಸೊಪ್ಪು, 2 – ಟೊಮೆಟೊ ಹಣ್ಣು, 4 ರಿಂದ 5 ಎಸಳು – ಬೆಳ್ಳುಳ್ಳಿ, ಕಾಯಿ ತುರಿ-1/4 ಕಪ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಹರಿವೆ ಸೊಪ್ಪನ್ನು ಮೊದಲಿಗೆ ಚೆನ್ನಾಗಿ ತೊಳೆದು ಅದನ್ನು ಸಣ್ಣ ಸಣ್ಣದಾಗಿ ಮಾಡಿಕೊಂಡು ನಂತರ ಗ್ಯಾಸ್ ಆನ್ ಮಾಡಿ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ನಂತರ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ.
ನಂತರ ಟೊಮೆಟೊ ಹಾಕಿ ಹರಿವೆ ಸೊಪ್ಪನ್ನು ಹಾಕಿ ಅದು ಬೆಂದ ನಂತರ ಅದಕ್ಕೆ ಸ್ವಲ್ಪ ಕಾಯಿ ತುರಿ ಮತ್ತ್ತು ಖಾರದ ಪುಡಿ ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 5 ನಿಮಿಷಗಳವರೆಗೆ ಫ್ರೈ ಮಾಡಿ ಗ್ಯಾಸ್ ಆಫ್ ಮಾಡಿದರೆ ರುಚಿಯಾದ ಹರಿವೆ ಸೊಪ್ಪಿನ ಪಲ್ಯ ರೆಡಿ.