ಸಿರಿಧಾನ್ಯಗಳಲ್ಲಿ ಒಂದು ಸಜ್ಜೆ. ಇದರಿಂದ ಮಾಡುವ ತಿನಿಸುಗಳು ಆರೋಗ್ಯಕರ ಹಾಗೂ ರುಚಿಕರವು ಹೌದು.
ಯಥೇಚ್ಛವಾದ ಖನಿಜಾಂಶಗಳನ್ನು ಹೊಂದಿರುವ ಸಜ್ಜೆಯಿಂದ ಸಂಜೆಗೆ ಬಿಸಿಬಿಸಿಯಾದ ಆರೋಗ್ಯಕರ ಪಕೋಡ ತಯಾರಿಸಬಹುದು. ಇಲ್ಲಿದೆ ಸಜ್ಜೆ ಪಕೋಡ ತಯಾರಿಸುವ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು
ಸಜ್ಜೆ ಹಿಟ್ಟು – 1 ಕಪ್
ಕಡಲೆ ಹಿಟ್ಟು – 1/2 ಕಪ್
ಈರುಳ್ಳಿ – 1 (ಉದ್ದಕ್ಕೆ ಹೆಚ್ಚಿದ್ದು)
ಹಸಿಮೆಣಸಿನಕಾಯಿ – 4
ಅಚ್ಚ ಖಾರದ ಪುಡಿ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಒಂದು ಪಾತ್ರೆಗೆ ಸಜ್ಜೆ ಹಿಟ್ಟು, ಕಡಲೆ ಹಿಟ್ಟು, ಉದ್ದಕ್ಕೆ ಹೆಚ್ಚಿಕೊಂಡ ಈರುಳ್ಳಿ, ಚಿಕ್ಕದಾಗಿ ಕತ್ತರಿಸಿಕೊಂಡ ಹಸಿಮೆಣಸಿನಕಾಯಿ, ಬೇಕಾದಷ್ಟು ಅಚ್ಚ ಖಾರದ ಪುಡಿ ಹಾಗೂ ಉಪ್ಪು ಎಲ್ಲವನ್ನೂ ಸೇರಿಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಬಳಿಕ ಕಾದ ಎಣ್ಣೆಯಲ್ಲಿ ಕರೆದರೆ ಸಜ್ಜೆ ಪಕೋಡ ಸವಿಯಲು ಸಿದ್ಧ.