ಆಹಾರದಲ್ಲಿ ಕಾಳುಗಳಿದ್ದರೆ ರುಚಿ ಹೆಚ್ಚಾಗುತ್ತದೆ. ಹಸಿ ಕಾಳುಗಳು ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಒಣ ಕಾಳುಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ.
ಅಂತಹ ಕಾಳುಗಳಲ್ಲಿ ಒಂದಾದ ಹೆಸರುಕಾಳು ಉಸುಳಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
ಹೆಸರುಕಾಳು -500 ಗ್ರಾಂ, ಹಸಿಮೆಣಸಿನ ಕಾಯಿ -4, ಉಪ್ಪು -2 ಚಮಚ, ಕೊಬ್ಬರಿ ತುರಿ -100 ಗ್ರಾಂ, ಕರಿಬೇವು -4 ಎಲೆ, ಸಾಸಿವೆ -1 ಚಮಚ, ಎಣ್ಣೆ -2 ಚಮಚ.
ತಯಾರಿಸುವ ವಿಧಾನ:
ಹೆಸರುಕಾಳುಗಳನ್ನು 4 -5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ. ನಂತರ ಕುಕ್ಕರ್ ನಲ್ಲಿಟ್ಟು ಬೇಯಿಸಿ. ಮೆಣಸಿನ ಕಾಯಿ ಕರಿಬೇವನ್ನು ಸಣ್ಣಗೆ ಹೆಚ್ಚಿಕೊಳ್ಳಿರಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲೆ ಇಟ್ಟು ಕಾಯಿಸಿರಿ. ಸಾಸಿವೆ ಒಗ್ಗರಣೆ ಮಾಡಿ ಮೆಣಸಿನ ಕಾಯಿ, ಕರಿಬೇವು ಹಾಕಿ ಕರಿಯಿರಿ.
ನಂತರ ಬೇಯಿಸಿಕೊಂಡ ಕಾಳು, ಕೊಬ್ಬರಿ ತುರಿ, ಉಪ್ಪು ಹಾಕಿ ಕಲೆಸಿರಿ. 2 ನಿಮಿಷವಾದ ನಂತರ ಬಾಣಲೆಯನ್ನು ಒಲೆಯಿಂದ ಕೆಳಗೆ ಇಳಿಸಿ ಹೆಸರುಕಾಳು ಉಸುಳಿಯನ್ನು ತಟ್ಟೆಗೆ ಹಾಕಿಕೊಂಡು ತಿನ್ನಿರಿ.