ಸಂಜೆಯ ಸ್ನ್ಯಾಕ್ಸ್ ಗೆ ಏನಾದರೂ ಆರೋಗ್ಯಕರವಾದದ್ದನ್ನು ಮಾಡಿಕೊಂಡು ಸವಿಯಬೇಕು ಅಂದುಕೊಂಡಿದ್ದೀರಾ…? ಹಾಗಿದ್ರೆ ತಡವೇಕೆ ಇಲ್ಲಿದೆ ನೋಡಿ ರುಚಿಕರವಾದ, ಆರೋಗ್ಯಕರವಾದ ಸ್ನ್ಯಾಕ್ಸ್.
ಬೇಕಾಗುವ ಪದಾರ್ಥ:
ಕಪ್ಪು ಕಡಲೆಕಾಳು – 1 ಕಪ್ ಬೇಯಿಸಿದ್ದು, ½ ಟೀ ಸ್ಪೂನ್ ಜೀರಿಗೆ ಪುಡಿ, ½ ಟೀ ಸ್ಪೂನ್ ಅರಿಸಿನ, ¼ ಟೀ ಸ್ಪೂನ್ ಖಾರದಪುಡಿ, ಧನಿಯಾ ಪುಡಿ – 1 ಟೀ ಸ್ಪೂನ್, ಚಾಟ್ ಮಸಾಲ – 1/2 ಟೀ ಸ್ಪೂನ್, ½ ಟೀ ಸ್ಪೂನ್ ಗರಂ ಮಸಾಲ, ಕರಿಬೇವಿನ ಎಲೆ – 5 ಎಸಳು, ¼ ಕಪ್ ಕೊತ್ತಂಬರಿ ಸೊಪ್ಪು, ½ ಟೀ ಸ್ಪೂನ್, ಸಾಸಿವೆ, ಜೀರಿಗೆ. ರುಚಿಗೆ ತಕ್ಕಷ್ಟು ಉಪ್ಪು, 2 ಟೇಬಲ್ ಸ್ಪೂನ್ ಎಣ್ಣೆ.
ಮಾಡುವ ವಿಧಾನ:
ಒಂದು ಬೌಲ್ ಗೆ ಸ್ವಲ್ಪ ಉಪ್ಪು, ಅರಿಶಿನ, ಖಾರದಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ ಹಾಕಿ ಸ್ವಲ್ಪ ನೀರು ಪೇಸ್ಟ್ ರೀತಿ ಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ, ಸಾಸಿವೆ, ಕರಿಬೇವು ಹಾಕಿ. ನಂತರ ರೆಡಿ ಮಾಡಿಟ್ಟುಕೊಂಡ ಖಾರದಪುಡಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಬೇಯಿಸಿಟ್ಟುಕೊಂಡ ಕಡಲೆಕಾಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಗರಂ ಮಸಾಲ, ಚಾಟ್ ಮಸಾಲ ಹಾಕಿ ಸ್ವಲ್ಪ ಹೊತ್ತು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರವಾದ ಮಸಾಲ ಚನ್ನಾ ಫ್ರೈ ಸವಿಯಲು ಸಿದ್ಧ.