ಡಿಸೆಂಬರ್ ಬಂತೆಂದರೆ ಆರೇಂಜ್ ಹಣ್ಣುಗಳು ಎಲ್ಲೆಡೆ ಗಮನ ಸೆಳೆಯುತ್ತದೆ. ವಿಟಮಿನ್ ಸಿ ಆಗರ ಆರೇಂಜ್. ಸುಲಭವಾಗಿ ಸಿಪ್ಪೆ ಬಿಡಿಸಲು ಸಾಧ್ಯವಿರುವ ಹಣ್ಣು ಆರೇಂಜ್. ಮಕ್ಕಳಿಂದ ಮುದುಕರವರೆಗೂ ಈ ಆರೇಂಜ್ ಹಣ್ಣು ಎಲ್ಲರಿಗೂ ಪ್ರಿಯ.
ಆರೇಂಜ್ ಹಣ್ಣು ತಿಂದ ಮೇಲೆ ಸಿಪ್ಪೆ ಎಸೆಯುವವರೆ ಹೆಚ್ಚು. ಆದರೆ ಆರೇಂಜ್ ಸಿಪ್ಪೆ ಬಳಸಿ ಸುಲಭವಾಗಿ ಈ ಗೊಜ್ಜು ತಯಾರಿಸಿ ರುಚಿ ನೋಡಿ.
ಬೇಕಾಗುವ ಸಾಮಗ್ರಿ
ಚಿಕ್ಕದಾಗಿ ಹೆಚ್ಚಿಕೊಂಡ (ಕಟ್) ಆರೇಂಜ್ ಸಿಪ್ಪೆ – 1 ಬಟ್ಟಲು
ಹುಣಸೆ ರಸ – ದೊಡ್ಡ ಚಮಚ
ಸಾರಿನ ಪುಡಿ – 1 ಚಮಚ
ಬೆಲ್ಲ – ಸ್ವಲ್ಪ
ಅರಿಶಿನ – ಸ್ವಲ್ಪ
ಎಣ್ಣೆ – ಸ್ವಲ್ಪ
ಉಪ್ಪು – ರುಚಿಗೆ ಬೇಕಾದಷ್ಟು.
ಮಾಡುವ ವಿಧಾನ
ಬಾಣಲೆಗೆ ಕಟ್ ಮಾಡಿರುವ ಆರೇಂಜ್ ಸಿಪ್ಪೆ ಹಾಕಿ ಚೆನ್ನಾಗಿ ಫ್ರೈ ಮಾಡಿ. ಹುಣಸೆ ನೀರಿನಲ್ಲಿ 5 ನಿಮಿಷ ಬೇಯಿಸಿ. ನಂತರ ಸಾರಿನ ಪುಡಿ, ಅರಿಶಿನ, ಬೆಲ್ಲ ಹಾಗೂ ಉಪ್ಪು ಹಾಕಿ ಇನ್ನಷ್ಟು ಹೊತ್ತು ಬೇಯಿಸಿ ಗೊಜ್ಜಿನ ಹದ ಬಂದಾಗ ಕೆಳಗಿಳಿಸಿ.
ರುಚಿಯಾದ ಈ ಗೊಜ್ಜು ಬಿಸಿ ಬಿಸಿ ಅನ್ನ ಅಥವಾ ಮುದ್ದೆಗೆ ಒಳ್ಳೆಯ ಕಾಂಬಿನೇಶನ್.