ತಮ್ಮ ಮುಂಬರುವ ಸಿನಿಮಾ ಗೆಹರಿಯಾದ ಪ್ರಮೋಷನ್ನಲ್ಲಿ ಬ್ಯುಸಿ ಆಗಿರುವ ನಟಿ ದೀಪಿಕಾ ಪಡುಕೋಣೆ ಹೊಸ ಹೊಸ ಔಟ್ಫಿಟ್ಗಳಲ್ಲಿ ಕ್ಯಾಮರಾ ಕಣ್ಣೆದುರು ಬೀಳುತ್ತಲೇ ಇದ್ದಾರೆ. ಈ ಭಾರಿ ನಟಿ ದೀಪಿಕಾ ಕೇಸರಿ ಬಣ್ಣದ ಡ್ರೆಸ್ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ನಟಿ ದೀಪಿಕಾ ಪಡುಕೋಣೆ ನಟನೆಯ ಗೆಹರಿಯಾ ಸಿನಿಮಾ ಫೆಬ್ರವರಿ 11ರಂದು ರಿಲೀಸ್ ಆಗಲಿದೆ. ಸಿನಿಮಾದ ಟ್ರೇಲರ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದು ಸಿನಿಮಾದ ಬಗ್ಗೆ ಕೂಡ ಸಿನಿ ರಸಿಕರು ದೊಡ್ಡ ಮಟ್ಟದ ನಿರೀಕ್ಷೆಯನ್ನೆ ಇಟ್ಟುಕೊಂಡಿದ್ದಾರೆ.
ಗೆಹರಿಯಾ ಸಿನಿಮಾದ ಜೊತೆಯಲ್ಲಿ ದೀಪಿಕಾ ಪಡುಕೋಣೆ ಇದೀಗ ತಮ್ಮ ಬೋಲ್ಡ್ ಫೋಟೋಶೂಟ್ ಮೂಲಕ ಸದ್ದು ಮಾಡಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆ ಧರಿಸಿರುವ ಈ ಉಡುಗೆ ಡೇವಿಡ್ ಕೋಮಾರ ವೆಬ್ಸೈಟ್ನಲ್ಲಿ ಲಭ್ಯವಿದೆ. ಈ ಬಟ್ಟೆಯನ್ನು ನೀವು ಧರಿಸಬೇಕು ಅಂದರೆ 48,300 ರೂಪಾಯಿ ವ್ಯಯಿಸಬೇಕು..!