alex Certify ಆಯತಪ್ಪಿ ಬಿದ್ದು ಇಬ್ಬರು ಪ್ಯಾರಾಗ್ಲೈಡರ್ ದಾರುಣ ಸಾವು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಯತಪ್ಪಿ ಬಿದ್ದು ಇಬ್ಬರು ಪ್ಯಾರಾಗ್ಲೈಡರ್ ದಾರುಣ ಸಾವು….!

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಬಿರ್​ ಬಿಲ್ಲಿಂಗ್​ನಲ್ಲಿ ನಡೆದ ಪ್ಯಾರಾಗ್ಲೈಡಿಂಗ್​ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕಾಶ್​ ಅಗರ್ವಾಲ್​ ಎಂಬುವರು ವಿಕಾಸ್​ ಕಪೂರ್​ ಜೊತೆಗೆ ಪ್ಯಾರಾಗ್ಲೈಡರ್​​ ಟೇಕಾಫ್​​ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಕಂಗ್ರಾ ಡಿಸಿ ನಿಪುನ್​ ಜಿಂದಾಲ್​ ಎಂಬವರು ಈ ವಿಚಾರವಾಗಿ ಮಾತನಾಡಿದ್ದು, ಬಿರ್​ ಕಣಿವೆಯಲ್ಲಿ ಟೇಕಾಫ್​ ಮಾಡುವಾಗ ಇಬ್ಬರು ಪ್ಯಾರಾಗ್ಲೈಡರ್​​ಗಳು ಸಾವನ್ನಪ್ಪಿದ್ದಾರೆ. ಹಾಗೂ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಯತಪ್ಪಿದ ಪರಿಣಾಮ ಗ್ಲೈಡರ್​ಗಳು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.

ಗ್ಲೈಡರ್​​ನ್ನು ತಳ್ಳುತ್ತಿದ್ದ ಸಹಾಯಕ ರಾಕೇಶ್​ ಕುಮಾರ್​ ಹಗ್ಗಕ್ಕೆ ಸಿಲುಕಿದ್ದರಿಂದ ಗ್ಲೈಡರ್​​ ಸಮತೋಲನ ಕಳೆದುಕೊಂಡಿತು, ಅಗರ್ವಾಲ್​ ಹಾಗೂ ವಿಕಾಸ್​​​ ಕಪೂರ್​ ಇಬ್ಬರೂ 20-30 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...