ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಬಿರ್ ಬಿಲ್ಲಿಂಗ್ನಲ್ಲಿ ನಡೆದ ಪ್ಯಾರಾಗ್ಲೈಡಿಂಗ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಕಾಶ್ ಅಗರ್ವಾಲ್ ಎಂಬುವರು ವಿಕಾಸ್ ಕಪೂರ್ ಜೊತೆಗೆ ಪ್ಯಾರಾಗ್ಲೈಡರ್ ಟೇಕಾಫ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಂಗ್ರಾ ಡಿಸಿ ನಿಪುನ್ ಜಿಂದಾಲ್ ಎಂಬವರು ಈ ವಿಚಾರವಾಗಿ ಮಾತನಾಡಿದ್ದು, ಬಿರ್ ಕಣಿವೆಯಲ್ಲಿ ಟೇಕಾಫ್ ಮಾಡುವಾಗ ಇಬ್ಬರು ಪ್ಯಾರಾಗ್ಲೈಡರ್ಗಳು ಸಾವನ್ನಪ್ಪಿದ್ದಾರೆ. ಹಾಗೂ ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಯತಪ್ಪಿದ ಪರಿಣಾಮ ಗ್ಲೈಡರ್ಗಳು ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಗ್ಲೈಡರ್ನ್ನು ತಳ್ಳುತ್ತಿದ್ದ ಸಹಾಯಕ ರಾಕೇಶ್ ಕುಮಾರ್ ಹಗ್ಗಕ್ಕೆ ಸಿಲುಕಿದ್ದರಿಂದ ಗ್ಲೈಡರ್ ಸಮತೋಲನ ಕಳೆದುಕೊಂಡಿತು, ಅಗರ್ವಾಲ್ ಹಾಗೂ ವಿಕಾಸ್ ಕಪೂರ್ ಇಬ್ಬರೂ 20-30 ಅಡಿ ಆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.