ಆನ್ಲೈನ್ನಲ್ಲಿ ಏನಾದರೂ ಆರ್ಡರ್ ಮಾಡಿ ಅದು ಯಾವಾಗ ನಮ್ಮ ಕೈ ಸೇರುತ್ತೆ ಅಂತಾ ಕಾಯೋದ್ರಲ್ಲಿ ಇರುವ ಸಂತೋಷವೇ ಬೇರೆ. ಅದೇ ರೀತಿ ಆನ್ಲೈನ್ ವೆಬ್ಸೈಟ್ನಲ್ಲಿ ಐಫೋನ್ 13 ಪ್ರೋ ಮ್ಯಾಕ್ಸ್ ಬುಕ್ ಮಾಡಿ ಕಾತುರದಿಂದ ಕಾಯುತ್ತಿದ್ದ ವ್ಯಕ್ತಿಯೊಬ್ಬರಿಗೆ ಭ್ರಮ ನಿರಸನವಾಗಿದೆ.
ಸರಿಯಾದ ಸಮಯಕ್ಕೆ ಡೆಲಿವರಿ ನೀಡದೇ 2 ವಾರಗಳ ಕಾಲ ಕಾಯಿಸಿದರೂ ಸಹ ಕಾದ ಡೇನಿಯಲ್ ಕೊನೆಗೂ ತಮ್ಮ ಕೈಗೆ ಪಾರ್ಸಲ್ ಬಂದು ತಲುಪುತ್ತಿದ್ದಂತೆಯೇ ಸಖತ್ ಖುಶ್ ಆಗಿದ್ದರು. ಆದರೆ ಡೆಲಿವರಿ ಪ್ಯಾಕ್ ಒಡೆದು ನೋಡುತ್ತಿದ್ದಂತೆಯೇ ಐ ಫೋನ್ ಬದಲು ಎರಡು ಕ್ಯಾಡ್ಬರಿ ಚಾಕಲೇಟ್ ಹಾಗೂ ಟಾಯ್ಲೆಟ್ ಟಿಶ್ಯೂ ಪೇಪರ್ ಇರೋದನ್ನು ಕಂಡು ಶಾಕ್ ಆಗಿದ್ದಾರೆ.
ಲಾಜಿಸ್ಟಿಕ್ ಕೆಲಸ ಮಾಡುವ ಕ್ಯಾರೋಲ್ ಟ್ವಿಟರ್ನಲ್ಲಿ ಈ ವಿಚಾರವನ್ನು ಶೇರ್ ಮಾಡಿದ್ದಾರೆ. ವಾರಗಳ ಕಾಲ ಕಾದ ಬಳಿಕ ನನ್ನ ಹೊಚ್ಚ ಹೊಸ ಐಫೋನ್ 13 ಪ್ರೋ ಮ್ಯಾಕ್ಸ್ ಡೆಲಿವರಿ ಪಡೆದಿದ್ದೆ. ಕ್ರಿಸ್ಮಸ್ನಂದು ನಾನು ಸ್ವೀಕರಿಸಿದ ಪಾರ್ಸೆಲ್ ಬಾಕ್ಸಿನಲ್ಲಿ ಮೊಬೈಲ್ನ ಬದಲು ಚಾಕಲೇಟ್ ಹಾಗೂ ಟಿಶ್ಯೂ ಪೇಪರ್ ಇಡಲಾಗಿದೆ ಎಂದು ಬರೆದಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಬ್ರಿಟನ್ನ ಡಿಹೆಚ್ಎಲ್ ನೆಟ್ವರ್ಕ್ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಕ್ಯಾರೋಲ್ಗೆ ಶೀಘ್ರದಲ್ಲಿಯೇ ಮೊಬೈಲ್ ಫೋನ್ ಕಳುಹಿಸಲಾಗುತ್ತದೆ ಎಂದು ಹೇಳಿದೆ.