alex Certify ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ‘ಗಾಳಿಪಟ-2’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ‘ಗಾಳಿಪಟ-2’

ಬಹುನಿರೀಕ್ಷಿತ ‘ಗಾಳಿಪಟ-2’ ಚಿತ್ರ ಆಗಸ್ಟ್ 12 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ ಎಂದು ಸಿನಿಮಾ ಪ್ರಚಾರ ತಂಡದ ಕಲಾವಿದರಾದ ನಯನಾ ಶರತ್ ಮತ್ತು ಮಡೇನೂರು ಮನು ತಿಳಿಸಿದರು.

ಅವರು ಇಂದು ಚಿತ್ರದ ಪ್ರಚಾರದ ಅಂಗವಾಗಿ ಶಿವಮೊಗ್ಗದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗಾಳಿಪಟ-2’ ಬಹುನಿರೀಕ್ಷಿತ ಚಿತ್ರವಾಗಿದೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ಚಿತ್ರದ ನಿರ್ದೇಶಕರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಮತ್ತೊಮ್ಮೆ ಈ ಚಿತ್ರ ಹೆಸರು ತಂದುಕೊಡಲಿದೆ. ಹಾಗೆಯೇ ನಿರ್ದೇಶಕ ಯೋಗರಾಜ್ ಭಟ್ ಅವರಿಗೂ ಇದು ಮಹತ್ವದ ಚಿತ್ರವಾಗಿದೆ ಎಂದರು.

ಈಗಾಗಲೇ ಈ ಚಿತ್ರದ ನಾಲ್ಕು ಹಾಡುಗಳು ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಅಪಾರ ಜನಪ್ರತಿಯತೆ ಪಡೆದಿವೆ. ಚಿತ್ರದ ಟ್ರೈಲರ್ ಕೂಡ ಪ್ರೇಕ್ಷಕರ ಮನಗೆದ್ದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಚಿತ್ರದ ಒಂದೊಂದು ದೃಶ್ಯಗಳೂ ಅದ್ಭುತವಾಗಿ ಮೂಡಿಬಂದಿವೆ. ಗಾಳಿಪಟ ಮೊದಲ ಭಾಗದ ಚಿತ್ರದ ಎಳೆಯನ್ನು ಇಟ್ಟುಕೊಂಡು ಈ ಚಿತ್ರವನ್ನು ಹಿಗ್ಗಿಸಲಾಗಿದೆ. ಇದೊಂದು ಸ್ವತಂತ್ರ ಚಿತ್ರವೂ ಹೌದು ಎಂದರು.

ಈ ಚಿತ್ರವನ್ನು ಇಡೀ ಕುಟುಂಬ ಕುಳಿತು ನೋಡಬಹುದಾಗಿದೆ. ಚಿತ್ರದಲ್ಲಿ ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ನಾಯಕ ಗಣೇಶ್ ಜೊತೆ ಹೆಜ್ಜೆ ಹಾಕಲಿದ್ದಾರೆ. ಉಳಿದಂತೆ ಅನಂತ್‌ ನಾಗ್, ದಿಗಂತ್, ರಂಗಾಯಣ ರಘು, ಸುಧಾ ಬೆಳವಾಡಿ, ಪದ್ಮಜಾ‌ ರಾವ್, ದಿವಂಗತ ಬುಲೆಟ್ ಪ್ರಕಾಶ್ ಮತ್ತಿತರರು ತಾರಾಗಣದಲ್ಲಿದ್ದಾರೆ.

ಉಮಾ ಹಾಗೂ ಎಂ. ರಮೇಶ್ ರೆಡ್ಡಿ ಚಿತ್ರ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯರ ಸಂಗೀತ, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ಆಗಸ್ಟ್ 12ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ರಾಜ್ಯದಲ್ಲಿ 250 ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ವೀಕ್ಷಿಸುವಂತೆ ಮನವಿ ಮಾಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...