alex Certify ಆಗಸ್ಟ್‌ ತಿಂಗಳಿನಲ್ಲಿ 18 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಬ್ಯಾಂಕ್‌ ಹಾಲಿಡೆಯ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸ್ಟ್‌ ತಿಂಗಳಿನಲ್ಲಿ 18 ದಿನ ಬ್ಯಾಂಕ್‌ಗಳಿಗೆ ರಜಾ, ಇಲ್ಲಿದೆ ಬ್ಯಾಂಕ್‌ ಹಾಲಿಡೆಯ ಸಂಪೂರ್ಣ ವಿವರ

ನಿಮಗೇನಾದ್ರೂ ಬ್ಯಾಂಕ್‌ ಕೆಲಸಗಳಿದ್ರೆ ಆದಷ್ಟು ಬೇಗ ಮುಗಿಸಿಕೊಳ್ಳಿ. ಯಾಕಂದ್ರೆ ಈ ತಿಂಗಳು 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜಾ ಇದೆ. ಆರ್‌ಬಿಐ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಆಗಸ್ಟ್‌ ತಿಂಗಳಿನಲ್ಲಿ 12 ದಿನ ಬ್ಯಾಂಕ್‌ಗಳು ತೆರೆದಿರುವುದಿಲ್ಲ. ವೀಕೆಂಡ್‌ ರಜಾಗಳೆಲ್ಲ ಸೇರಿ ಒಟ್ಟು 18 ದಿನ ಬ್ಯಾಂಕ್‌ಗಳಿಗೆ ರಜಾ ಇದೆ.

ಆದ್ರೆ ಬ್ಯಾಂಕ್‌ಗಳ ರಜಾ ದಿನಗಳು ನಗರದಿಂದ ನಗರಕ್ಕೆ ಬದಲಾಗುತ್ತವೆ. ಆಗಸ್ಟ್‌ 13ರಂದು ದೇಶಪ್ರೇಮಿಗಳ ದಿನ ಆಚರಿಸುತ್ತಿದ್ದು, ಅಂದು ಇಂಫಾಲ್‌ದಲ್ಲಿ  ಪ್ರಾದೇಶಿಕ ರಜಾ ದಿನವಿದೆ. ಇದು ತಿಂಗಳ 2 ನೇ ಶನಿವಾರವೂ ಆಗಿದ್ದರಿಂದ ಬ್ಯಾಂಕ್‌ಗಳು ತೆರೆದಿರುವುದಿಲ್ಲ. ಇದೇ ರೀತಿ ಆಗಸ್ಟ್‌ ತಿಂಗಳಿನಲ್ಲಿ ಯಾವ್ಯಾವ ದಿನಾಂಕದಂದು ಯಾವ್ಯಾವ ನಗರಗಳಲ್ಲಿ ಬ್ಯಾಂಕ್‌ಗಳಿಗೆ ರಜಾ ಇದೆ ಅನ್ನೋದನ್ನು ನೋಡೋಣ.

ಆಗಸ್ಟ್ 1: ದ್ರುಕ್ಪಾ ತ್ಶೆ-ಜಿ – ಗ್ಯಾಂಗ್ಟಾಕ್‌

ಆಗಸ್ಟ್‌ 8: ಮೊಹರಂ – ಜಮ್ಮು, ಶ್ರೀನಗರ

ಆಗಸ್ಟ್ 9: ಮೊಹರಂ – ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚೆನ್ನೈ, ಹೈದರಾಬಾದ್, ಜೈಪುರ, ಕಾನ್ಪುರ, ಕೋಲ್ಕತ್ತಾ, ಲಕ್ನೋ, ಮುಂಬೈ, ನಾಗ್ಪುರ, ನವದೆಹಲಿ, ಪಾಟ್ನಾ, ರಾಯ್ಪುರ್ ಮತ್ತು ರಾಂಚಿ

ಆಗಸ್ಟ್ 11: ರಕ್ಷಾ ಬಂಧನ – ಅಹಮದಾಬಾದ್, ಭೋಪಾಲ್, ಡೆಹ್ರಾಡೂನ್, ಜೈಪುರ ಮತ್ತು ಶಿಮ್ಲಾ

ಆಗಸ್ಟ್ 12: ರಕ್ಷಾ ಬಂಧನ – ಕಾನ್ಪುರ, ಮತ್ತು ಲಕ್ನೋ

ಆಗಸ್ಟ್ 13: ದೇಶಪ್ರೇಮಿಗಳ ದಿನ – ಇಂಫಾಲ

ಆಗಸ್ಟ್ 15: ಸ್ವಾತಂತ್ರ್ಯ ದಿನ – ಭಾರತದಾದ್ಯಂತ

ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಶಾಹೆನ್‌ಶಾಹಿ) – ಬೇಲಾಪುರ್, ಮುಂಬೈ ಮತ್ತು ನಾಗ್ಪುರ

ಆಗಸ್ಟ್ 18: ಜನ್ಮಾಷ್ಟಮಿ – ಭುವನೇಶ್ವರ್, ಡೆಹ್ರಾಡೂನ್, ಕಾನ್ಪುರ್ ಮತ್ತು ಲಕ್ನೋ

ಆಗಸ್ಟ್ 19: ಜನ್ಮಾಷ್ಟಮಿ/ ಕೃಷ್ಣ ಜಯಂತಿ — ಅಹಮದಾಬಾದ್, ಭೋಪಾಲ್, ಚಂಡೀಗಢ, ಚೆನ್ನೈ, ಗ್ಯಾಂಗ್ಟಾಕ್, ಜೈಪುರ, ಜಮ್ಮು, ಪಾಟ್ನಾ, ರಾಯಪುರ, ರಾಂಚಿ, ಶಿಲ್ಲಾಂಗ್ ಮತ್ತು ಶಿಮ್ಲಾ

ಆಗಸ್ಟ್ 20: ಶ್ರೀ ಕೃಷ್ಣ ಅಷ್ಟಮಿ – ಹೈದರಾಬಾದ್

ಆಗಸ್ಟ್ 29: ಶ್ರೀಮಂತ ಶಂಕರದೇವನ ತಿಥಿ – ಗುವಾಹಟಿ

ಆಗಸ್ಟ್ 31: ಸಂವತ್ಸರಿ /ಗಣೇಶ ಚತುರ್ಥಿ — ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ ಮತ್ತು ಪಣಜಿ

ವಾರಾಂತ್ಯದ ರಜೆಗಳ ಪಟ್ಟಿ:

ಆಗಸ್ಟ್ 7: ಮೊದಲ ಭಾನುವಾರ

ಆಗಸ್ಟ್ 13: ಎರಡನೇ ಶನಿವಾರ + ದೇಶಪ್ರೇಮಿಗಳ ದಿನ

ಆಗಸ್ಟ್ 14: ಎರಡನೇ ಭಾನುವಾರ

ಆಗಸ್ಟ್ 21: ಮೂರನೇ ಭಾನುವಾರ

ಆಗಸ್ಟ್ 27: ನಾಲ್ಕನೇ ಶನಿವಾರ

ಆಗಸ್ಟ್ 28: ನಾಲ್ಕನೇ ಭಾನುವಾರ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...