alex Certify ಆಕ್ರೋಶಕ್ಕೆ ಕಾರಣವಾಗಿದೆ ʼಪಬ್‌ʼ ಹೆಸರು…! ಇದರ ಹಿಂದಿನ ಕಾರಣವೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕ್ರೋಶಕ್ಕೆ ಕಾರಣವಾಗಿದೆ ʼಪಬ್‌ʼ ಹೆಸರು…! ಇದರ ಹಿಂದಿನ ಕಾರಣವೇನು ಗೊತ್ತಾ…?

ಟೆಕ್ಸಾ‌ಸ್‌ನ ಫೋರ್ಟ್ ವರ್ತ್ ನಗರದಲ್ಲಿ ತೆರೆಯಲಾದ ಹೊಸ ಪಬ್‌ವೊಂದು ತನ್ನ ಹೆಸರಿನಿಂದಾಗಿ ಅಮೆರಿಕದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಮೆರಿಕದ ಅಸ್ತಿತ್ವಕ್ಕೇ ಎಂದೂ ಮರೆಯದ ಪೆಟ್ಟು ಕೊಟ್ಟ ಸೆಪ್ಟೆಂಬರ್‌ 11, 2001ರ ದಾಳಿಯನ್ನು ನೆನೆಪಿಸುವ ಹಾಗೆ ಮಾಡುವ ’ಬಾರ್‌ 9 ಇಲೆವೆನ್’ ಎಂದು ಈ ಪಬ್‌ಗೆ ಹೆಸರಿಡಲಾಗಿದೆ.

ಜೆಸ್ಸಿ ಟೈಲರ್‌ ಹೆಸರಿನ ವ್ಯಕ್ತಿಯೊಬ್ಬರು ಈ ಪಬ್‌ನ ಚಿತ್ರಗಳನ್ನು ಟ್ವಿಟರ್‌ನಲ್ಲಿನ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಹೌದು, ಈ ಹೆಸರಿಗೂ ಅಂದಿನ ಆ ಘಟನೆಗೂ ಸಂಬಂಧವಿದೆ.

ನ್ಯೂಯಾರ್ಕ್ ಪೋಸ್ಟ್‌ನ ವರದಿಯೊಂದರ ಪ್ರಕಾರ, ನಗರದ ರಿಯೋ ಮಾಂಬೋ ಎಂಬ ಟೆಕ್ಸ್‌-ಮೆಕ್ಸ್ ರೆಸ್ಟೋರಂಟ್‌ಗೆ ಈ ಚಿತ್ರಗಳ ಗ್ಯಾಲರಿಯನ್ನು ಸರ್ವ್ ಮಾಡಲಾಗುತ್ತಿದೆ. ಈ ಗ್ಯಾಲರಿಯಲ್ಲಿ 9/11 ದಾಳಿಯ ಅನೇಕ ಚಿತ್ರಗಳು ಇದ್ದು, ಈ ದಾಳಿಗಳು ಅಮೆರಿಕವನ್ನು ಹೇಗೆ ಬದಲಿಸಿತು ಎಂದು ನೆನಪಿಸುವಂತೆ ಇದೆ.

9/11ರ ದಾಳಿ ನಡೆದ ದಿನವೇ ತಮ್ಮ ರೆಸ್ಟೋರೆಂಟ್ ತೆರೆದ ಕಾರಣ ಈ ಹೆಸರಿಟ್ಟಿದ್ದು, ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ತಮ್ಮದೇ ಶೈಲಿ ಇದಾಗಿದೆ ಎಂದು ಪಬ್‌ನ ಮಾಲೀಕ ಬ್ರೆಂಟ್‌ ಜಾನ್ಸನ್ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...