
ಟೆಕ್ಸಾಸ್‌ನ ಫೋರ್ಟ್ ವರ್ತ್ ನಗರದಲ್ಲಿ ತೆರೆಯಲಾದ ಹೊಸ ಪಬ್‌ವೊಂದು ತನ್ನ ಹೆಸರಿನಿಂದಾಗಿ ಅಮೆರಿಕದ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಮೆರಿಕದ ಅಸ್ತಿತ್ವಕ್ಕೇ ಎಂದೂ ಮರೆಯದ ಪೆಟ್ಟು ಕೊಟ್ಟ ಸೆಪ್ಟೆಂಬರ್ 11, 2001ರ ದಾಳಿಯನ್ನು ನೆನೆಪಿಸುವ ಹಾಗೆ ಮಾಡುವ ’ಬಾರ್ 9 ಇಲೆವೆನ್’ ಎಂದು ಈ ಪಬ್‌ಗೆ ಹೆಸರಿಡಲಾಗಿದೆ.
ಜೆಸ್ಸಿ ಟೈಲರ್ ಹೆಸರಿನ ವ್ಯಕ್ತಿಯೊಬ್ಬರು ಈ ಪಬ್‌ನ ಚಿತ್ರಗಳನ್ನು ಟ್ವಿಟರ್‌ನಲ್ಲಿನ ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು, ಈ ಹೆಸರಿಗೂ ಅಂದಿನ ಆ ಘಟನೆಗೂ ಸಂಬಂಧವಿದೆ.
ನ್ಯೂಯಾರ್ಕ್ ಪೋಸ್ಟ್‌ನ ವರದಿಯೊಂದರ ಪ್ರಕಾರ, ನಗರದ ರಿಯೋ ಮಾಂಬೋ ಎಂಬ ಟೆಕ್ಸ್-ಮೆಕ್ಸ್ ರೆಸ್ಟೋರಂಟ್‌ಗೆ ಈ ಚಿತ್ರಗಳ ಗ್ಯಾಲರಿಯನ್ನು ಸರ್ವ್ ಮಾಡಲಾಗುತ್ತಿದೆ. ಈ ಗ್ಯಾಲರಿಯಲ್ಲಿ 9/11 ದಾಳಿಯ ಅನೇಕ ಚಿತ್ರಗಳು ಇದ್ದು, ಈ ದಾಳಿಗಳು ಅಮೆರಿಕವನ್ನು ಹೇಗೆ ಬದಲಿಸಿತು ಎಂದು ನೆನಪಿಸುವಂತೆ ಇದೆ.
9/11ರ ದಾಳಿ ನಡೆದ ದಿನವೇ ತಮ್ಮ ರೆಸ್ಟೋರೆಂಟ್ ತೆರೆದ ಕಾರಣ ಈ ಹೆಸರಿಟ್ಟಿದ್ದು, ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸುವ ತಮ್ಮದೇ ಶೈಲಿ ಇದಾಗಿದೆ ಎಂದು ಪಬ್‌ನ ಮಾಲೀಕ ಬ್ರೆಂಟ್ ಜಾನ್ಸನ್ ತಿಳಿಸಿದ್ದಾರೆ.
