alex Certify ಆಕಸ್ಮಿಕವಾಗಿ ಬಾರ್‌ಗೆ ಎಂಟ್ರಿ ಕೊಟ್ಟ ಕಾಂಗರೂ: ಕ್ಯಾರೆ ಎನ್ನದ ಗ್ರಾಹಕರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಕಸ್ಮಿಕವಾಗಿ ಬಾರ್‌ಗೆ ಎಂಟ್ರಿ ಕೊಟ್ಟ ಕಾಂಗರೂ: ಕ್ಯಾರೆ ಎನ್ನದ ಗ್ರಾಹಕರು..!

Kangaroo Casually Walks Into a Bar In Australia. (Image: Instagram/australian.animals)ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ಕಾಂಗರೂಗಳು ನೋಡಲು ಸಿಗುವುದು ಸಾಮಾನ್ಯವಾಗಿದೆ. ಇದೀಗ ಕಾಂಗರೂ ಬಾರ್‌ಗೆ ಆಕಸ್ಮಿಕವಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಔಟ್ ಆಗಿದೆ. ಆಸ್ಟ್ರೇಲಿಯನ್ ಅನಿಮಲ್ಸ್ ಎಂಬ ಪುಟದಿಂದ ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.

ಜನರು ಕಾಂಗಾರೂ ಬಾರ್ ಗೆ ಎಂಟ್ರಿ ಕೊಟ್ಟಾಗ ಪ್ರತಿಕ್ರಿಯಿಸಿದ ರೀತಿ ನಿಜಕ್ಕೂ ಆಶ್ಚರ್ಯಕರವಾಗಿದೆ. ಜನರು ಕಾಂಗರೂ ಉಪಸ್ಥಿತಿಗೆ ಒಗ್ಗಿಕೊಂಡಿರುವಂತೆ ತೋರುತ್ತಿದೆ. ಆದರೆ, ನೆಟ್ಟಿಗರು ಮಾತ್ರ ಈ ವಿಡಿಯೋ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಂಗರೂವಿನ ಅನಿರೀಕ್ಷಿತ ಭೇಟಿ ಕಂಡು ಆಸಕ್ತಿದಾಯಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ ನಂತರ ಸಾವಿರಾರು ಲೈಕ್ ಗಳೊಂದಿಗೆ ವೈರಲ್ ಆಗಿದೆ. ಕಾಂಗರೂ ಬಾರ್ ಗೆ ಎಂಟ್ರಿ ಕೊಟ್ಟಾಗ ಅಲ್ಲಿದ್ದ ಪ್ರತಿಯೊಬ್ಬರು ಅದನ್ನು ನೋಡಿ ಸುಮ್ಮನಾಗಿದ್ದಾರೆ. ಅವರಿಗೇನು ಇದು ಅನಿರೀಕ್ಷಿತ ಎಂದೆನಿಸಿಲ್ಲ. ಎಲ್ಲರೂ ಕೂಡ ತಮ್ ತಮ್ಮ ವ್ಯವಹಾರದಲ್ಲಿ ತೊಡಗಿದ್ದಾರೆ. ಕಾಂಗರೂ ಬಂತು ಅಂತಾ ಗಲಾಟೆಯೂ ಉಂಟಾಗಿಲ್ಲ. ಬಹುಶಃ ಇದು ಕೂಡ ಬಾರ್ ಗೆ ಆಗಾಗ್ಗೆ ಭೇಟಿ ನೀಡುತ್ತದೆ ಎಂದು ತೋರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...