alex Certify ಆಂಡ್ರಾಯ್ಡ್‌ ಫೋನ್‌ ಬಳಸ್ತಿದ್ದೀರಾ ? ನಿಮ್ಮ ಮೊಬೈಲ್‌ನಲ್ಲಿರಬಹುದು ಈ ಅಪಾಯಕಾರಿ ಟ್ರೋಜನ್‌ ವೈರಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಡ್ರಾಯ್ಡ್‌ ಫೋನ್‌ ಬಳಸ್ತಿದ್ದೀರಾ ? ನಿಮ್ಮ ಮೊಬೈಲ್‌ನಲ್ಲಿರಬಹುದು ಈ ಅಪಾಯಕಾರಿ ಟ್ರೋಜನ್‌ ವೈರಸ್‌

ಆಂಡ್ರಾಯ್ಡ್‌ ಫೋನ್‌ ಬಳಕೆ ಮಾಡ್ತಿರುವವರು ಓದಲೇಬೇಕಾದ ಸುದ್ದಿ ಇದು. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಕೆಲವೊಂದು ಅಪ್ಲಿಕೇಶನ್‌ಗಳಲ್ಲಿ ಟ್ರೋಜನ್‌ ಎಂಬ ವೈರಸ್‌ ಇರುವುದು ಪತ್ತೆಯಾಗಿದೆ. ಡಾ. ವೆಬ್‌ ವರದಿಯ ಪ್ರಕಾರ ಆಂಡ್ರಾಯ್ಡ್‌ಗಳಲ್ಲಿ ಇಂತಹ ಅಪಾಯಕಾರಿ ಅಪ್ಲಿಕೇಶನ್‌ಗಳು ಸಾಕಷ್ಟಿವೆ.

ಬಳಕೆದಾರರ ಖಾಸಗಿ ಡೇಟಾ ಹಾಗೂ ಇತರ ಮಾಹಿತಿಗಳನ್ನು ಕದಿಯಲೆಂದೇ ಕೆಲವೊಂದು ನಕಲಿ ಅಪ್ಲಿಕೇಶನ್‌ಗಳನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. Android.Spy.4498 trojan ಎಂಬುದು ಇತರ ಅಪ್ಲಿಕೇಶನ್‌ಗಳಿಂದ ಬಳಕೆದಾರರ ಡೇಟಾ ಕದಿಯುತ್ತಿರುವುದು ಬಹಿರಂಗವಾಗಿದೆ.

ಬಳಕೆದಾರರು ತಮಗೆ ಅರಿವಿಲ್ಲದಂತೆಯೇ ಇಂತಹ ಮಾಲ್ವೇರ್‌ಗಳಿಗೆ ತುತ್ತಾಗುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಗೂಗಲ್‌ನ ಪ್ಲೇ ಸ್ಟೋರ್‌ನಲ್ಲಿ ಇಂತಹ ಡಜನ್‌ಗಟ್ಟಲೆ ಅಪ್ಲಿಕೇಶನ್‌ಗಳು ಪತ್ತೆಯಾಗಿವೆ. 98,90,000 ಡೌನ್ಲೋಡ್‌ಗಳನ್ನು ಮಾಡಲಾಗಿದೆ.

ಇಮೇಜ್‌ ಎಡಿಟಿಂಗ್‌ ಸಾಫ್ಟ್‌ವೇರ್‌ಗಳು, ವರ್ಚುವಲ್‌ ಕೀಬೋರ್ಡ್‌, ಸಿಸ್ಟಮ್‌ ಟೂಲ್‌ಗಳು ಮತ್ತು ಯುಟಿಲಿಟಿ, ಕಾಲಿಂಗ್‌ ಆಪ್ಸ್‌, ವಾಲ್‌ ಪೇಪರ್‌ ಕಲೆಕ್ಷನ್‌ ಆಪ್‌ಗಳು ಕಂಡು ಬಂದಿವೆ. ಕೆಲವೊಮ್ಮೆ ಬ್ಯಾಟರಿ ಸೇವಿಂಗ್‌ ಆಪ್ಷನ್‌ಗೆ ಬಳಕೆದಾರರು ಯೆಸ್‌ ಕ್ಲಿಕ್‌ ಮಾಡಿದಾಗ್ಲೂ ಇಂತಹ ಮಾಲ್ವೇರ್‌ಗಳಿಗೆ ತುತ್ತಾಗುತ್ತಾರೆ.

ಟ್ರೋಜನ್ಸ್‌ ವೈರಸ್‌ ಹೊಂದಿರೋ ಅಪ್ಲಿಕೇಶನ್‌ಗಳ ಪಟ್ಟಿ ಇಲ್ಲಿದೆ, ಇವುಗಳಲ್ಲಿ ಯಾವುದನ್ನಾದರೂ ನೀವು ಬಳಸ್ತಾ ಇದ್ರೆ ಕೂಡಲೇ ಡಿಲೀಟ್‌ ಮಾಡುವುದು ಉತ್ತಮ.

Photo Editor: Beauty Filter; Photo Editor: Retouch & Cutout; Photo Editor: Art Filters; Photo Editor – Design Maker; Photo Editor & Background Eraser; Photo & Exif Editor; Photo Editor – Filters Effects; Photo Filters & Effects; Photo Editor : Blur Image; Photo Editor : Cut, Paste; Emoji Keyboard: Stickers & GIF; Neon Theme Keyboard; Cashe Cleaner; FastCleaner: Cashe Cleaner; Funny Wallpapers – Live Screen; Notes – reminders.

ಇದಲ್ಲದೆ ತಜ್ಞರು Android.Joker ನಿಂದ ಇನ್ನೊಂದಷ್ಟು ಟ್ರೋಜನ್‌ಗಳನ್ನು ಕಂಡುಹಿಡಿದಿದ್ದಾರೆ. ಅವುಗಳು ಅನಿಯಂತ್ರಿತ ಕೋಡ್ ಅನ್ನು ಡೌನ್‌ಲೋಡ್ ಮಾಡಲು, ಕಾರ್ಯಗತಗೊಳಿಸಲು ಮತ್ತು ಬಳಕೆದಾರರಿಗೆ ಅರಿವಿಲ್ಲದೆ ಪಾವತಿಸಿದ ಮೊಬೈಲ್ ಸೇವೆಗಳಿಗೆ ಚಂದಾದಾರರಾಗಲು ಸಮರ್ಥವಾಗಿವೆ. ಅವುಗಳಲ್ಲಿ ಒಂದನ್ನು ಥರ್ಡ್-ಪಾರ್ಟಿ ಲಾಂಚರ್ “ಪೊಕೊ ಲಾಂಚರ್” ನಲ್ಲಿ ಮರೆಮಾಡಲಾಗಿದೆ, ಇನ್ನೊಂದು “4K ಪ್ರೊ ಕ್ಯಾಮೆರಾ” ಅಪ್ಲಿಕೇಶನ್‌ನಲ್ಲಿದೆ. ಮೂರನೆಯದು ‘ಹಾರ್ಟ್ ಎಮೋಜಿ ಸ್ಟಿಕ್ಕರ್‌ಗಳು’ ಸ್ಟಿಕ್ಕರ್‌ಗಳ ಸಂಗ್ರಹ ಅಪ್ಲಿಕೇಶನ್‌ನಲ್ಲಿದೆʼ.

ಮೇಲೆ ತಿಳಿಸಲಾದ ಯಾವುದೇ ಅಪ್ಲಿಕೇಶನ್‌ಗಳನ್ನು ತಮ್ಮ ಫೋನ್‌ನಲ್ಲಿ ಡೌನ್ಲೋಡ್‌ ಮಾಡಿಕೊಂಡಿದ್ದರೆ Android ಬಳಕೆದಾರರು ಅವುಗಳನ್ನು ಡಿಲೀಟ್‌ ಮಾಡುವುದರ ಜೊತೆಗೆ ನಿಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಪಾಸ್‌ವರ್ಡ್‌ಗಳನ್ನು ಸಹ ಬದಲಾಯಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...