alex Certify ಆಂಟಿಬಯೋಟಿಕ್ ಸೇವನೆ ನಂತರ ವ್ಯಕ್ತಿಯಲ್ಲುಂಟಾಯ್ತು ವಿಚಿತ್ರ ಭ್ರಮೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಟಿಬಯೋಟಿಕ್ ಸೇವನೆ ನಂತರ ವ್ಯಕ್ತಿಯಲ್ಲುಂಟಾಯ್ತು ವಿಚಿತ್ರ ಭ್ರಮೆ….!

ಜಿನೆವಾದ 50 ವರ್ಷದ ವ್ಯಕ್ತಿಯೊಬ್ಬರು ಭ್ರಮೆಗಳನ್ನು ಅನುಭವಿಸಿದ ವಿಲಕ್ಷಣ ಘಟನೆ ನಡೆದಿದೆ.

ವರದಿಯ ಪ್ರಕಾರ, ಬ್ಯಾಕ್ಟೀರಿಯಾದ ನ್ಯುಮೋನಿಯಾಕ್ಕೆ ಆಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ ನಂತರ ವ್ಯಕ್ತಿಯು ಭ್ರಮೆಯನ್ನು ಅನುಭವಿಸಿದ್ದಾರೆ. ದೇವರು ತನ್ನ ಜೊತೆ ಮಾತನಾಡುತ್ತಿರುವಂತೆ ಭಾಸವಾಗುವಂತಹ ಭ್ರಮೆಗಳು ಆತನಲ್ಲಿ ಉಂಟಾಗಿದೆ. ಅಸಮಂಜಸವಾಗಿ ಮಾತನಾಡುವಂತಹ ನಡವಳಿಕೆಗಳು ಉನ್ಮಾದದ ​​ಲಕ್ಷಣಗಳಾಗಿವೆ.

ಜಿನೆವಾದಲ್ಲಿ ತುರ್ತು ಮನೋವೈದ್ಯಕೀಯ ಘಟಕಕ್ಕೆ ತಪಾಸಣೆಗೆ ಒಳಗಾದ ನಂತರ, ಆ ವ್ಯಕ್ತಿ ಆಂಟಿಬಯೋಟಿಕ್ ಸೇವನೆ ನಂತರ ತಾನು ರಾತ್ರಿ ಸಾಯುತ್ತಿರುವಂತೆ ಭಾಸವಾಯಿತು ಮತ್ತು ದೇವರು ತನ್ನೊಂದಿಗೆ ಮಾತನಾಡುತ್ತಿರುವ ಭ್ರಮೆ ಉಂಟಾಯಿತೆಂದು ಮನೋವೈದ್ಯರಲ್ಲಿ ಹೇಳಿಕೊಂಡಿದ್ದಾನೆ. ಈ ರೋಗಲಕ್ಷಣಗಳು ಸೈಕೋಸಿಸ್ ಅನ್ನು ಸೂಚಿಸಬಹುದು.

ಆಗಸ್ಟ್ 2021 ರಲ್ಲಿ ಪ್ರಕಟವಾದ ಪ್ರಕರಣದ ವರದಿಯ ಪ್ರಕಾರ, ಪ್ರತಿಜೀವಕಗಳ ಚಿಕಿತ್ಸೆಯ ಅಪರೂಪದ ಅಡ್ಡ ಪರಿಣಾಮವಾದ ಆಂಟಿಬಯೋಮೇನಿಯಾವನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಆಂಟಿಬಯೋಮೇನಿಯಾ ಎಂಬ ಪದವನ್ನು 2002ರ ವಿಮರ್ಶೆಯಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ಸೈಕೋಫಾರ್ಮಾಕಾಲಜಿಯಲ್ಲಿ ಪ್ರಕಟಿಸಲಾಯಿತು.

ಇನ್ನು ಪ್ರಕರಣದ ವರದಿಯ ಪ್ರಕಾರ, ಆಂಟಿಬಯೋಟಿಕ್ಸ್ ಮಾತ್ರೆಗಳನ್ನು ನುಂಗುವುದನ್ನು ನಿಲ್ಲಿಸಿದ ಒಂದು ವಾರದ ನಂತರ ವ್ಯಕ್ತಿಗೆ ಯಾವುದೇ ರೀತಿಯ ಭ್ರಮೆ ಎದುರಾಗಿಲ್ಲ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...