ಹೊರಗಿನ ಆಹಾರಗಳನ್ನು ಸೇವಿಸುವುದರಿಂದ ಕೆಲವೊಮ್ಮೆ ಅಜೀರ್ಣ ಸಮಸ್ಯೆ, ಅಸಿಡಿಟಿ ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಅಡುಗೆ ಮನೆಯ ಸಾಮಾಗ್ರಿಗಳೇ ಸಾಕು.
ಒಂದೆಲಗವನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ನಮ್ಮ ನೆನಪಿನ ಶಕ್ತಿ ಅಧಿಕವಾಗುತ್ತದೆ ಎಂದು ಹೇಳುತ್ತಾರೆ.
ಅದೇ ರೀತಿ ಒಂದೆಲಗ ಸೊಪ್ಪನ್ನು ಪ್ರತಿ ದಿನ ಊಟವಾದ ನಂತರ ತಿನ್ನುವುದರಿಂದ ಅಜೀರ್ಣ ಸಮಸ್ಯೆ ದೂರವಾಗಿ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
ಜೀರಿಗೆ ಪುಡಿ ಮಾಡಿ ಕುದಿಸಿ ತುಂಡು ಬೆಲ್ಲ ಸೇರಿಸಿ ಕಷಾಯ ಮಾಡಿ ಕುಡಿದರೆ ಆಸಿಡಿಟಿ ಸಮಸ್ಯೆ ದೂರವಾಗುತ್ತದೆ.
ಊಟವಾದ ಬಳಿಕ ರಾತ್ರಿ ಮಲಗುವ ಮುನ್ನ ಒಂದು ಲೋಟ ತಣ್ಣನೆಯ ಹಾಲು ಕುಡಿಯುವುದರಿಂದಲೂ ಆಸಿಡಿಟಿ ಸಮಸ್ಯೆಯನ್ನು ದೂರವಿಡಬಹುದು.