ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸೋಲಿನ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ವೈ ಎಸ್ ವಿ ದತ್ತಾ, ಯಾಕೆ ಇಂತಹ ಫಲಿತಾಂಶ ಬಂದಿದೆ ಎಂಬುದನ್ನು ಪಕ್ಷ ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ವೈ ಎಸ್ ವಿ ದತ್ತಾ, ಚುನಾವಣೆಯಿಂದ ಚುನಾವಣೆಗೆ, ದಿನದಿಂದ ದಿನಕ್ಕೆ ನಮ್ಮ ವೋಟ್ ಬ್ಯಾಂಕ್ ಛಿದ್ರವಾಗುತ್ತಿದೆ. ದುರ್ಬಲವಾಗುತ್ತಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಕೊನೇ ಕ್ಷಣದವರೆಗೂ ನಮ್ಮ ನಿಲುವೇನು ಎಂಬುದನ್ನು ಹೇಳದೇ ಇರೋದು ಇಂಥ ಪರಿಸ್ಥಿತಿ ಸೃಷ್ಟಿಗೆ ಕಾರಣ ಎಂದರು.
BREAKING: ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ, ಟಿಕೆಟ್ ದರ ಇಳಿಕೆ; ವೋಲ್ವೊ ಪ್ರಯಾಣ ದರ ಶೇ. 34 ರಷ್ಟು ಕಡಿತ ಮಾಡಿದ BMTC
ಕೊನೇ ಕ್ಷಣದವರೆಗೂ ಕಾರ್ಯಕರ್ತರಿಗೆ ಏನು ಮಾಡಬೇಕು ಎಂಬುದು ತೋಚದೆ ತಮಗೆ ಬೇಕಾದ್ದನ್ನು ಮಾಡಿಕೊಳ್ಳುತ್ತಾರೆ. ಪ್ರಾದೇಶಿಕ ಪಕ್ಷದಲ್ಲಿ ಇಂತಹ ಕ್ರಮ ಸರಿಯಲ್ಲ. ಕೆಟ್ಟ ನಿರ್ಧಾರದಿಂದ ಕೆಟ್ಟ ಪರಿಸ್ಥಿತಿ, ಕೆಟ್ಟ ಫಲಿತಾಂಶ ಬರಲು ಕಾರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.