alex Certify ಅಶ್ವಿನ್‌ ರ ʼಕನೆಕ್ಟ್‌ʼ ಚಿತ್ರಕ್ಕೆ ಸಮಂತಾ ಬದಲು ನಯನತಾರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ವಿನ್‌ ರ ʼಕನೆಕ್ಟ್‌ʼ ಚಿತ್ರಕ್ಕೆ ಸಮಂತಾ ಬದಲು ನಯನತಾರಾ

ಮಾಜಿ ಪತಿ ನಾಗ ಚೈತನ್ಯರಿಂದ ಬೇರ್ಪಟ್ಟ ಬಳಿಕ ಹಾಲಿಡೇ ಮೂಡ್‌ನಲ್ಲಿದ್ದ ದಕ್ಷಿಣ ಭಾರತೀಯ ನಟಿ ಸಮಂತಾ ರುತ್‌ ಪ್ರಭು ಇದೀಗ ಒಂದರ ಹಿಂದೆ ಒಂದರಂತೆ ಚಿತ್ರಗಳಲ್ಲಿ ಬ್ಯುಸಿಯಾಗುತ್ತಿದ್ದಾರೆ. ಸಮಂತಾ ಮುಂದೆ ಬಹಳಷ್ಟು ಚಿತ್ರಗಳು ಇದ್ದರೂ ಸಹ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ’ಪುಷ್ಪ’ ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಚಿತ್ರದ ನಿರ್ಮಾಪಕರು ಆಕೆಯನ್ನು ಒಂದು ಐಟಂ ಹಾಡಿಗೆ ಕುಣಿಸಿದ್ದಾರೆ. ಹಾಡಿನ ಶೂಟಿಂಗ್ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದೆ.

ಈ ದೇವಸ್ಥಾನಕ್ಕೆ ಅರ್ಪಿಸುವ ಹಾಲು ನೀಲಿ ಬಣ್ಣಕ್ಕೆ ತಿರುಗುತ್ತದೆಯಂತೆ

ಇದೇ ವೇಳೆ, ಮಾಯಾ ಹಾಗೂ ಗೇಮ್ ಓವರ್‌ ನಿದೇರ್ಶಕ ಅಶ್ವಿನ್ ಸರವಣನ್‌ರ ಹೊಸ ಚಿತ್ರವೊಂದರಲ್ಲಿ ಸಮಂತಾ ಬದಲಿಗೆ ನಯನತಾರಾ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಬಂದಿವೆ. ಚಿತ್ರದಲ್ಲಿ ನಟಿಸಲು ಸಮಂತಾ ಬಹಳ ಹಿಂದೆಯೇ ಸಹಿ ಮಾಡಿದ್ದರೂ ಸಹ ಕೋವಿಡ್ ಕಾರಣದಿಂದಾಗಿ ಚಿತ್ರ ಪ್ರಾಜೆಕ್ಟ್‌ ಆರಂಭವಾಗಲು ತಡವಾಗಿದೆ.

ಪರಿಸ್ಥಿತಿ ಸಹಜತೆಯತ್ತ ಮರಳುತ್ತಲೇ ಸಮಂತಾ ಹಾಗೂ ಅಶ್ವಿನ್ ತಂತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿ, ಇಬ್ಬರೂ ಒಟ್ಟಿಗೇ ಮಾಡಬೇಕಿದ್ದ ಈ ಯೋಜನೆಗೆ ಗಮನ ನೀಡಲಿಲ್ಲ.

ಒಂಟಿ ಒಂಟಿಯಾಗಿರುವುದು ಬೋರೋ ಬೋರೋ ಎನ್ನಬೇಕಾಗಿಲ್ಲ….! ಬಾಟಲಿ ಮೂಲಕ ಸಿಗಲಿದ್ದಾರೆ ಸಂಗಾತಿ

ವರದಿಗಳ ಪ್ರಕಾರ; ಅಶ್ವಿನ್‌ರ ಮುಂದಿನ ಚಿತ್ರ ’ಕನೆಕ್ಟ್‌’ನಲ್ಲಿ ನಯನತಾರಾ, ಸಮಂತಾರ ಬದಲಿಗೆ ಕಾಣಿಸಿಕೊಳ್ಳಲಿದ್ದಾರೆ. ನಯನತಾರಾ ಇರುವ ಕನೆಕ್ಟ್ ಚಿತ್ರದ ಮೊದಲ ಲುಕ್‌ ಅನ್ನು ಚಿತ್ರನಿರ್ಮಾಪಕರು ವಾರಗಳ ಹಿಂದೆ ಬಿಡುಗಡೆ ಮಾಡಿದ್ದಾರೆ. ಇದೇ ಚಿತ್ರದಲ್ಲಿ ಸತ್ಯರಾಜ್ ಹಾಗೂ ಅನುಪಮ್ ಖೇರ್‌ ಸಹ ನಟಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...