alex Certify ಅವರನ್ನು ಸೋಲಿಸುವವರೆಗೂ ಸಮಾಧಾನವಿಲ್ಲ; ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟ ವರ್ತೂರು ಪ್ರಕಾಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವರನ್ನು ಸೋಲಿಸುವವರೆಗೂ ಸಮಾಧಾನವಿಲ್ಲ; ಬೆಂಬಲಿಗರ ಸಭೆಯಲ್ಲಿ ಕಣ್ಣೀರಿಟ್ಟ ವರ್ತೂರು ಪ್ರಕಾಶ್

ಕೋಲಾರ: ವಿಧಾನಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಬೆಂಬಲಿಸುವುವುದಾಗಿ ಘೋಷಿಸಿರುವ ವರ್ತೂರು ಪ್ರಕಾಶ್, ಕಾಂಗ್ರೆಸ್ ಸೋಲಿಸುವವರೆಗೂ ನನಗೆ ಸಮಾಧಾನವಿಲ್ಲ ಎಂದು ಹೇಳಿದರು.

ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ವರ್ತೂರು ಪ್ರಕಾಶ್, ಹುಲಿ ತರ ಇದ್ದೀಯಾ, ಹುಲಿ ತರ ನಡೆಸಿಕೊಳ್ಳು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ನನಗೆ ಭರವಸೆ ನೀಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ ಸಿಎಂ ಬೊಮ್ಮಾಯಿ ನನ್ನ ನೆರವು ಬಯಸಿದ್ದಾರೆ. ಬಿಜೆಪಿಯವರು ನನ್ನನ್ನು ಬಹಳ ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ನನ್ನ ಬೆಂಬಲ ಎಂದು ಘೋಷಿಸಿದರು.

ಕಳೆದ ಕೆಲ ವರ್ಷಗಳಿಂದ ನಾನು ಸಾಕಷ್ಟು ದುಃಖ ಅನುಭವಿಸಿದ್ದೇನೆ. ನಿಮ್ಮ ದುಡ್ಡಲ್ಲೇ ನೀವು ಜಿಲ್ಲಾ ಪಂಚಾಯತ್ ಚುನಾವಣೆ ಗೆದ್ರಿ. ಕಿಡ್ನಾಪ್ ಆಗಿದ್ದಾಗ ನನ್ನ ಜೀವ ಉಳಿದದ್ದೇ ಹೆಚ್ಚು. ಕಾಂಗ್ರೆಸ್ ಅಭ್ಯರ್ಥಿ ಈ ಹಿಂದೆ ನನ್ನನ್ನು ಸೋಲಿಸಿದ್ದರು. ಅದೇ ರೀತಿ ಅವರನ್ನು ಸೋಲಿಸುವವರೆಗೂ ನನಗೆ ಸಮಾಧಾನವಿಲ್ಲ. ಸಿಎಂ ಬೊಮ್ಮಾಯಿ ನನ್ನನ್ನು ಒಳ್ಳೆ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಕಣ್ಣೀರು ಹಾಕಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...