ಪ್ರತಿ ಬಾರಿ ಮಾತ್ರೆ ತೆಗೆದುಕೊಂಡೇ ತಿಂಗಳ ರಜೆಯನ್ನು ಬೇಗ ಮಾಡಿಸಿಕೊಳ್ಳಬೇಕಿಲ್ಲ. ಮನೆಯಲ್ಲೇ ಇರುವ ಕೆಲವು ಸಾಮಾಗ್ರಿಗಳನ್ನು ಸೇವಿಸುವುದರಿಂದಲೇ ರಜೆಯನ್ನು ನಿಗದಿತ ದಿನಕ್ಕಿಂತ ಮೊದಲೇ ಬರಿಸಿಕೊಳ್ಳಬಹುದು.
ಎಳ್ಳು ಈ ಸಾಲಿನಲ್ಲಿ ಮೊದಲ ಸ್ಥಾನದಲ್ಲಿದೆ. ಎಳ್ಳುಂಡೆ ಅಥವಾ ತಾಜಾ ಎಳ್ಳಿನ ಜ್ಯೂಸ್ ತಯಾರಿಸಿ ಕುಡಿಯುವುದರಿಂದ ಋತುಚಕ್ರವನ್ನು ಕೆಲವು ದಿನಗಳ ಮೊದಲೇ ಮಾಡಿಸಿಕೊಳ್ಳಬಹುದು.
ದೇಹದಲ್ಲಿ ಉಷ್ಣವನ್ನು ಹೆಚ್ಚಿಸುವ ಖರ್ಚೂರವನ್ನು ನಿಯಮಿತವಾಗಿ ಸೇವಿಸುವುದರಿಂದ ಅವಧಿಗೂ ಮುನ್ನವೇ ಮುಟ್ಟು ಬರುತ್ತದೆ. ಸೋಂಪು ಕಾಳು ಸೇವನೆಯೂ ದೇಹದಲ್ಲಿ ರಕ್ತ ಸಂಚಾರವನ್ನು ಆರೋಗ್ಯಕರವಾಗಿ ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ನೀರಿನಲ್ಲಿ ನೆನೆಸಿಟ್ಟು ಅಥವಾ ಖಾಲಿ ಹೊಟ್ಟೆಗೆ ಈ ಕಾಳುಗಳ ಚಹಾ ತಯಾರಿಸಿ ಕುಡಿಯುವುದು ಬಹಳ ಒಳ್ಳೆಯದು.
ಗರ್ಭ ಧಾರಣೆಯ ಸಾಧ್ಯತೆ ಇಲ್ಲದಿದ್ದರೆ ನೀವು ಪಪ್ಪಾಯ ಹಣ್ಣನ್ನು ಸೇವಿಸಿ. ಇದು ಕೂಡಾ ನಿಮ್ಮ ಮುಟ್ಟಿನ ಅವಧಿ ಮುಂಚಿತವಾಗಿ ಬರುವಂತೆ ಮಾಡುತ್ತದೆ. ನೆನೆಸಿಟ್ಟ ಕೊತ್ತಂಬರಿ ಬೀಜದ ನೀರು, ಅರಶಿನ ಪುಡಿಯೂ ಈ ನಿಟ್ಟಿನಲ್ಲಿ ನೆರವಾಗುತ್ತದೆ.