alex Certify ಅರ್ಜೆಂಟೈನಾ ಸೋತ ಹಿನ್ನೆಲೆಯಲ್ಲಿ ಕಣ್ಣೀರಿಟ್ಟಿದ್ದ ಬಾಲಕನಿಗೀಗ ಮೈದಾನದಲ್ಲೇ ಪಂದ್ಯ ನೋಡುವ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಜೆಂಟೈನಾ ಸೋತ ಹಿನ್ನೆಲೆಯಲ್ಲಿ ಕಣ್ಣೀರಿಟ್ಟಿದ್ದ ಬಾಲಕನಿಗೀಗ ಮೈದಾನದಲ್ಲೇ ಪಂದ್ಯ ನೋಡುವ ಅವಕಾಶ

ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಅರ್ಜೆಂಟೈನಾ ವಿರುದ್ಧ ಸೌದಿ ಅರೇಬಿಯಾ ಗೆಲುವು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಇದರ ಸಂಭ್ರಮಾಚರಣೆಯನ್ನು ಮಾಡುವ ಸಲುವಾಗಿಯೇ ಸೌದಿ ಅರೇಬಿಯಾ ಮೂರು ದಿನಗಳ ಕಾಲ ರಾಷ್ಟ್ರೀಯ ರಜಾದಿನವನ್ನು ಘೋಷಿಸಿತ್ತು.

ಆದರೆ ಈ ಸೋಲು ಅರ್ಜೆಂಟೈನಾದ ಅದರಲ್ಲೂ ಮೆಸ್ಸಿ ಅಭಿಮಾನಿಗಳಿಗೆ ಭಾರಿ ಬೇಸರ ತರಿಸಿತ್ತು. ಈ ಸೋಲಿನಿಂದ ಆಘಾತಗೊಂಡಿದ್ದ ಕೇರಳದ ಬಾಲಕನೊಬ್ಬ ಕಣ್ಣೀರಿಟ್ಟಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದೀಗ ಕೇರಳದ ಅರ್ಜೆಂಟೈನಾ ತಂಡದ ಅಭಿಮಾನಿಗಳು ಮೆಸ್ಸಿಯ ಅಪ್ಪಟ ಅಭಿಮಾನಿಯಾಗಿರುವ ಈ ಬಾಲಕನನ್ನು ಮೈದಾನದಲ್ಲಿಯೇ ಅರ್ಜೆಂಟೈನಾ ತಂಡದ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಕತಾರ್ ಗೆ ಕಳುಹಿಸಿಕೊಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...