ಅಮೆರಿಕದ ಏರ್ಫೋರ್ಸ್ನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ದರ್ಶನ್ ಶಾರಿಗೆ ಕರ್ತವ್ಯದ ಸಮಯದಲ್ಲಿಯೂ ತಿಲಕವನ್ನು ಧರಿಸಲು ಅನುಮತಿ ನೀಡಲಾಗಿದೆ.
ಫ್ರಾನ್ಸಿಸ್ಇ ವಾರನ್ ಏರ್ಫೋರ್ಸ್ನಲ್ಲಿ ಟೆಕ್ನಿಷಿಯನ್ ಆಗಿರುವ ದರ್ಶನ್ ಶಾ 2020ರಿಂದಲೂ ತಿಲಕವನ್ನು ಧರಿಸಲು ಅನುಮತಿ ನೀಡುವಂತೆ ಮನವಿ ಮಾಡುತ್ತಲೇ ಇದ್ದರು. ಕೊನೆಗೂ ಇವರಿಗೆ ಫೆಬ್ರವರಿ ತಿಂಗಳಲ್ಲಿ ಕರ್ತವ್ಯದ ಸಂದರ್ಭದಲ್ಲಿ ತಿಲಕ ಧರಿಸಲು ಅನುಮತಿ ನೀಡಲಾಗಿದೆ.
ಹಿಂದೂ ಕುಟುಂಬದಲ್ಲಿ ಜನಿಸಿರುವ ದರ್ಶನ್ ಶಾ, 2020ರ ಜೂನ್ ತಿಂಗಳಲ್ಲಿ ಮಿಲಿಟರಿ ತರಬೇತಿಗೆ ಹಾಜರಾಗಲು ಆರಂಭಿಸಿದಾಗಿನಿಂದ ತಮ್ಮ ಸಮವಸ್ತ್ರದ ಭಾಗವಾಗಿ ತಿಲಕವನ್ನು ಧರಿಸಲು ಬಯಸಿದ್ದರು. ಅದರಂತೆ ಇದೀಗ ಅಮೆರಿಕ ಏರ್ಫೋರ್ಸ್ ದರ್ಶನ್ ಬಯಕೆಗೆ ಅಸ್ತು ಎಂದಿದೆ
ದರ್ಶನ್ ಶಾ ವ್ಯೋಮಿಂಗ್ನಲ್ಲಿರುವ ಫ್ರಾನ್ಸಿಸ್ ಇ ವಾರೆನ್ ಏರ್ಫೋರ್ಸ್ ಬೇಸ್ನಲ್ಲಿ ಏರೋಸ್ಪೇಸ್ ವೈದ್ಯಕೀಯ ತಂತ್ರಜ್ಞರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.