alex Certify ಅಮೆಜಾನ್ ಪ್ರೈಮ್ ನಲ್ಲಿರುವ ‘ಕಾಂತರಾ’ ಸಿನಿಮಾದಲ್ಲಾಗಿದೆ ಈ ಬದಲಾವಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆಜಾನ್ ಪ್ರೈಮ್ ನಲ್ಲಿರುವ ‘ಕಾಂತರಾ’ ಸಿನಿಮಾದಲ್ಲಾಗಿದೆ ಈ ಬದಲಾವಣೆ…!

ರಿಶಭ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಬಿಡುಗಡೆಯಾದ ಕೇವಲ 40 ದಿನಗಳ ಅವಧಿಯಲ್ಲಿ ಈ ಚಿತ್ರ ಬರೋಬ್ಬರಿ 400 ಕೋಟಿ ರೂಪಾಯಿಗಳ ಗಳಿಕೆ ಮಾಡಿದ್ದು, ಇಂದಿನಿಂದ ಓ ಟಿ ಟಿ ಫ್ಲ್ಯಾಟ್ ಫಾರ್ಮ್ ಅಮೆಜಾನ್ ಪ್ರೈಮ್ ನಲ್ಲೂ ‘ಕಾಂತಾರ’ ಲಭ್ಯವಿದೆ.

ಆದರೆ ಇದರಲ್ಲಿ ಒಂದು ದೊಡ್ಡ ಬದಲಾವಣೆಯಾಗಿದ್ದು, ಚಿತ್ರದ ಹೈಲೈಟ್ ಆಗಿದ್ದ ‘ವರಾಹ ರೂಪಂ’ ಹಾಡಿನ ಸಂಗೀತವನ್ನು ಬದಲಾಯಿಸಿ ಹೊಸದಾಗಿ ಸೇರ್ಪಡೆ ಮಾಡಲಾಗಿದೆ. ಇದು ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಮೂಲ ಸಿನಿಮಾದ ‘ವರಾಹ ರೂಪಂ’ ಸಂಗೀತ ಹಾಗೂ ಹಾಡು ಸಕ್ಕತ್ ಫೇಮಸ್ ಆಗಿದ್ದು ಬಹುತೇಕರ ರಿಂಗ್ ಟೋನ್ ಕೂಡ ಇದೆ ಆಗಿತ್ತು.

ಆದರೆ ವರಾಹ ರೂಪಂ ಹಾಡು ಕೃತಿ ಚೌರ್ಯ ಎಂದು ಆರೋಪಿಸಿ ಕೇರಳದ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್ ತೈಕುಡಂ ಬ್ರಿಡ್ಜ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಇದರ ಪ್ರಸಾರಕ್ಕೆ ತಡೆಯಾಜ್ಞೆ ತಂದಿರುವ ಹಿನ್ನೆಲೆಯಲ್ಲಿ ವರಾಹ ರೂಪಂ ಹಾಡಿನ ಸಂಗೀತಕ್ಕೆ ಕೊಕ್ ನೀಡಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...