alex Certify ಅಮಾಯಕ ಯುವತಿಯರನ್ನು ಅತ್ಯಾಚಾರದ ಕೂಪಕ್ಕೆ ತಳ್ಳಿದ್ದ ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮಾಯಕ ಯುವತಿಯರನ್ನು ಅತ್ಯಾಚಾರದ ಕೂಪಕ್ಕೆ ತಳ್ಳಿದ್ದ ಆರೋಪಿಗಳು ಅರೆಸ್ಟ್

ಉತ್ತಮ ವೇತನ ಕೊಡಿಸುವ ನೆಪದಲ್ಲಿ ಅಮಾಯಕ ಯುವತಿಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆಂಧ್ರದ ವಿಶಾಖಪಟ್ಟಣಂ ಮೂಲದ ಗಂಧ ಭವಾನಿ ಹಾಗೂ ಗೋದಾವರಿ ಜಿಲ್ಲೆಯ ಕಸಿರೆಡ್ಡಿ ದೊರಬಾಬು ಬಂಧಿತರಾಗಿದ್ದಾರೆ.

ಇವರುಗಳು ಉತ್ತಮ ವೇತನದ ಆಮಿಷ ಒಡ್ಡಿ ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಿಂದ ಯುವತಿಯರನ್ನು ಕರೆಯಿಸಿಕೊಂಡು ಹೈದರಾಬಾದಿನ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.

ತಮಗೆ ದೊರೆತ ಖಚಿತ ಸುಳಿವಿನ ಮೇರೆಗೆ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಯುವತಿಯರನ್ನು ರಕ್ಷಿಸಿದ್ದಾರೆ. ಇನ್ನು ಮುಂದೆ ಇಂತಹ ಕೃತ್ಯದಲ್ಲಿ ತೊಡಗದಂತೆ ಯುವತಿಯರನ್ನು ಎಚ್ಚರಿಸಿ ಬಿಟ್ಟು ಕಳುಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...