alex Certify ಅಮವಾಸ್ಯೆಯ ಕರಾಳ ರಾತ್ರಿಯಲ್ಲಿ ಈ ತಪ್ಪನ್ನು ಮಾಡಬೇಡಿ, ನಿಮ್ಮ ಇಡೀ ಜೀವನವೇ ಸರ್ವನಾಶವಾಗಬಹುದು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮವಾಸ್ಯೆಯ ಕರಾಳ ರಾತ್ರಿಯಲ್ಲಿ ಈ ತಪ್ಪನ್ನು ಮಾಡಬೇಡಿ, ನಿಮ್ಮ ಇಡೀ ಜೀವನವೇ ಸರ್ವನಾಶವಾಗಬಹುದು…..!

ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳ ಅಮವಾಸ್ಯೆ ಹಾಗೂ ಪೂರ್ಣಿಮೆಯನ್ನು ವಿಶೇಷವೆಂದು ಪರಿಗಣಿಸಲಾಗುತ್ತದೆ. ಅಮವಾಸ್ಯೆಯ ತಿಥಿ ಪೂರ್ವಜರಿಗೆ ಮೀಸಲಾಗಿದೆ. ಇದಲ್ಲದೇ ಅಮವಾಸ್ಯೆಯ ರಾತ್ರಿ ತಂತ್ರ-ಮಂತ್ರಕ್ಕೂ ಮೀಸಲಾಗಿರುತ್ತದೆ. ಅದಕ್ಕಾಗಿಯೇ ಪ್ರತಿ ಅಮಾವಾಸ್ಯೆಯಲ್ಲೂ ಕೆಲವೊಂದು ನಿಯಮಗಳನ್ನು ಅನುಸರಿಸಬೇಕು. ಅಮವಾಸ್ಯೆಯ ಕರಾಳ ರಾತ್ರಿಯಲ್ಲಿ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.

ಇಂದು ಮೇ 19, ಶುಕ್ರವಾರ, ಜ್ಯೇಷ್ಠ ಅಮವಾಸ್ಯೆ. ಈ ದಿನ ವಟ ಸಾವಿತ್ರಿ ಉಪವಾಸವನ್ನು ಸಹ ಆಚರಿಸಲಾಗುತ್ತದೆ ಮತ್ತು ಶನಿ ಜಯಂತಿಯನ್ನು ಸಹ ಆಚರಿಸಲಾಗುತ್ತದೆ. ಇಂದು ರಾತ್ರಿ ಕೆಲವು ಕೆಲಸವನ್ನು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ಅದು ನಿಮ್ಮ ಜೀವನಕ್ಕೇ ಮಾರಕವಾಗಬಹುದು.  

ಅಮವಾಸ್ಯೆಯ ರಾತ್ರಿ ಈ ಕೆಲಸ ಮಾಡಬೇಡಿ

– ತಂತ್ರ ಸಾಧನಕ್ಕೆ ಅಮವಾಸ್ಯೆಯ ರಾತ್ರಿ ಬಹಳ ವಿಶೇಷ. ಅಘೋರಿ ಮತ್ತು ತಾಂತ್ರಿಕರು ಅಮವಾಸ್ಯೆಯ ರಾತ್ರಿ ಸ್ಮಶಾನದಲ್ಲಿ ಆಧ್ಯಾತ್ಮಿಕ ಅಭ್ಯಾಸವನ್ನು ಮಾಡುತ್ತಾರೆ ಮತ್ತು ತಮ್ಮ ಶಕ್ತಿಯನ್ನು ಹೆಚ್ಚಿಸುತ್ತಾರೆ. ಈ ಕಾರಣಕ್ಕಾಗಿ, ಅಮವಾಸ್ಯೆಯ ರಾತ್ರಿಯಲ್ಲಿ ರಾಕ್ಷಸ ಶಕ್ತಿಗಳು ಸಕ್ರಿಯವಾಗಿರುತ್ತವೆ. ಹಾಗಾಗಿ ಸ್ಮಶಾನ ಅಥವಾ ನಿರ್ಜನ ಸ್ಥಳಗಳ ಸುತ್ತಲೂ ಹೋಗಬಾರದು.

– ಅಮಾವಾಸ್ಯೆ ಮತ್ತು ಹುಣ್ಣಿಮೆಯಂದು ಚಂದ್ರನ ಸ್ಥಾನವು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಈ ಸಂದರ್ಭಗಳಲ್ಲಿ ಜನರು ಹೆಚ್ಚು ಭಾವನಾತ್ಮಕವಾಗಿರಲು, ತ್ವರಿತವಾಗಿ ಭಾವೋದ್ರಿಕ್ತರಾಗಲು ಇದು ಕಾರಣವಾಗಿದೆ. ಅದರಲ್ಲೂ ಮಾನಸಿಕವಾಗಿ ಹೆಚ್ಚು ಬಲವಿಲ್ಲದವರು ಅಮವಾಸ್ಯೆಯ ರಾತ್ರಿ ಹೆಚ್ಚು ಕೆಟ್ಟ ಆಲೋಚನೆಗಳನ್ನು ಮಾಡುತ್ತಾರೆ. ಇದರಿಂದಾಗಿ ಅವರು ತಪ್ಪು ಕೆಲಸಗಳನ್ನು ಮಾಡುತ್ತಾರೆ ಅಥವಾ ಇತರರಿಗೆ ಹಾನಿ ಮಾಡುತ್ತಾರೆ. ಅದನ್ನು ತಪ್ಪಿಸಲು ಮಂತ್ರವನ್ನು ಪಠಿಸಿ ಅಥವಾ ಹನುಮಾನ್ ಚಾಲೀಸಾವನ್ನು ಓದಿ. ಇದರಿಂದ ಮನಸ್ಸು ಸದೃಢವಾಗುತ್ತದೆ.

– ಅಮವಾಸ್ಯೆ ತಿಥಿಯನ್ನು ಪೂರ್ವಜರಿಗೆ ಸಮರ್ಪಿಸಲಾಗಿದೆ. ಈ ದಿನ ಮಾಂಸಾಹಾರ-ಮದ್ಯ ಇತ್ಯಾದಿಗಳನ್ನು ಸೇವಿಸಬಾರದು. ಅವುಗಳನ್ನು ಸೇವನೆ ಮಾಡಿದರೆ ಪಿತ್ರ ದೋಷವನ್ನು ಉಂಟುಮಾಡುತ್ತದೆ. ಇದರಿಂದ ಆರ್ಥಿಕ ಸಮಸ್ಯೆಗಳು, ವೃತ್ತಿಯಲ್ಲಿ ಅಡೆತಡೆಗಳು, ಮಕ್ಕಳನ್ನು ಹೊಂದುವಲ್ಲಿ ಸಮಸ್ಯೆಗಳಾಗುತ್ತವೆ.

– ಅಮವಾಸ್ಯೆಯ ದಿನದಂದು ಪತಿ-ಪತ್ನಿಯರು ದೈಹಿಕ ಸಂಬಂಧವನ್ನು ಹೊಂದಬಾರದು. ಈ ದಿನದ ಸಂಬಂಧದಿಂದ ಹುಟ್ಟಿದ ಮಗು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

– ಅಮವಾಸ್ಯೆಯಂದು ಉಗುರುಗಳು ಮತ್ತು ಕೂದಲನ್ನು ಕತ್ತರಿಸುವುದು ಸಹ ನಿಷಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...