ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಪ್ರಾಬಲ್ಯ ಸಾಧಿಸಿದ ಬಳಿಕ ಬ್ಯಾಟಿಂಗ್ ಸೂಪರ್ ಸ್ಟಾರ್ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬರನ್ನು ಸಂತಸಪಡಿಸಿದ್ದಾರೆ. ಹೋಟೆಲ್ಗೆ ತೆರಳಲು ತಂಡದ ಬಸ್ ಹತ್ತುವ ಮುನ್ನ ಕೊಹ್ಲಿ ಅಭಿಮಾನಿಯೊಬ್ಬರಿಗೆ ತಮ್ಮ ಜೆರ್ಸಿಯನ್ನು ನೀಡಿದ್ದಾರೆ.
ಈ ಟೆಸ್ಟ್ ಪಂದ್ಯವು ಅನೇಕ ಕಾರಣಗಳಿಂದಾಗಿ ಹೆಚ್ಚು ಸ್ಮರಣೀಯವಾಗಿದೆ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮುಂತಾದವರಂತೆ ಈ ಸಾಧನೆ ಮಾಡಿದ 12ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕೊಹ್ಲಿ ಅಂತಾರಾಷ್ಟ್ರೀಯ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯವನ್ನು ಪೂರೈಸಿದ್ದಾರೆ.
ತಂಡದ ಆಟಗಾರ ರವೀಂದ್ರ ಜಡೇಜಾ ಒಂದು ಟೆಸ್ಟ್ ಪಂದ್ಯದಲ್ಲಿ 150ಕ್ಕೂ ಅಧಿಕ ರನ್ ಹಾಗೂ 9 ವಿಕೆಟ್ಗಳನ್ನು ಕಿತ್ತ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಜಡೇಜಾ ಅಜೇಯ 175 ರನ್ಗಳನ್ನು ಸಿಡಿಸಿದ್ದರು.