alex Certify ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ಕೊಟ್ಟಿದ್ದಾರೆ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಮಿತಾಭ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಭಿಮಾನಿಗಳಿಗೆ ಬಿಗ್‌ ಸರ್ಪ್ರೈಸ್‌ ಕೊಟ್ಟಿದ್ದಾರೆ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಮಿತಾಭ್‌…..!

ಬಾಲಿವುಡ್‌ನ ಸೂಪರ್‌ ಸ್ಟಾರ್‌ 80ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅಮಿತಾಭ್ ಬಚ್ಚನ್ಗೆ ಇಂದು 80ನೇ ಹುಟ್ಟುಹಬ್ಬದ ಸಂಭ್ರಮ. ನಿನ್ನೆ ಮಧ್ಯರಾತ್ರಿಯಿಂದಲೇ ಬಿಗ್‌ ಬಿ ಬರ್ತಡೇ ಖುಷಿ ಅಭಿಮಾನಿಗಳಲ್ಲಿ ಮನೆ ಮಾಡಿತ್ತು.

ಶೆಹನ್‌ಶಾಗೆ ಶುಭಾಶಯ ಕೋರಲು ಸಾವಿರಾರು ಮಂದಿ ಮುಂಬೈನಲ್ಲಿರುವ ಅಮಿತಾಭ್‌ರ ನಿವಾಸ ಜಲ್ಸಾಕ್ಕೆ ಆಗಮಿಸಿದ್ದರು. ಅಭಿಮಾನಿಗಳ ಪ್ರೀತಿ, ವಿಶ್ವಾಸಕ್ಕೆ ಮಾರುಹೋದ ಅಮಿತಾಭ್‌ ಕೂಡ ನಿರಾಸೆ ಮಾಡಲಿಲ್ಲ. ಬಿಗ್‌ ಸರ್‌ಪ್ರೈಸ್‌ ಎಂಬಂತೆ ಬಂಗಲೆಯಿಂದ ಹೊರ ಬಂದು ಎಲ್ಲರಿಗೂ ಧನ್ಯವಾದ ಹೇಳಿದ್ರು.

ಮಗಳು ಶ್ವೇತಾ ಹಾಗೂ ಮೊಮ್ಮಗಳು ನವ್ಯಾ ನವೇಲಿ ಜೊತೆಗೆ ಅಮಿತಾಭ್‌ ಆಗಮಿಸಿದ್ದರು. ಅಭಿಮಾನಿಗಳತ್ತ ಕೈಬೀಸಿದ್ರು. ಅಭಿಮಾನಿಗಳ ಶುಭಾಶಯವನ್ನು ಖುಷಿ ಖುಷಿಯಾಗಿ ಸ್ವೀಕರಿಸಿದ್ರು. ಈ ದೃಶ್ಯಗಳನ್ನೆಲ್ಲ ಮೊಮ್ಮಗಳು ನವ್ಯಾ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾಳೆ. ಹೆಸರಾಂತ ನಟರಾಗಿದ್ದರೂ ಅಮಿತಾಭ್‌ರ ಸರಳತೆ ಮೆಚ್ಚುಗೆ ಗಳಿಸಿದೆ.

ಅಮಿತಾಭ್‌ ಹಾಗೂ ರಷ್ಮಿಕಾ ಮಂದಣ್ಣ ಅಭಿನಯದ ʼಗುಡ್‌ ಬೈʼ ಚಿತ್ರ ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಬಿಗ್‌ ಬಿ ಹುಟ್ಟುಹಬ್ಬದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಚಿತ್ರದ ಟಿಕೆಟ್‌ ದರವನ್ನು 80 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ. ಅಕ್ಟೋಬರ್ 7 ರಂದು ಈ ಚಿತ್ರ ರಿಲೀಸ್‌ ಆಗಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...