
ಯುಕೆ ಮೂಲದ ಮಹಿಳೆ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದರು. ಇದನ್ನು ತಿಳಿದ ನೆರೆಹೊರೆಯ ಅಫ್ಘನ್ ಕುಟುಂಬ ಆಕೆಗಾಗಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಕಳುಹಿಸಿಕೊಟ್ಟು ಔರ್ದಾರ್ಯತೆ ಮೆರೆದಿದ್ದಾರೆ.
ಬ್ಲೇಕ್ ಎಂಬಾಕೆ ತನ್ನ ನೆರೆಹೊರೆಯವರಿಗೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿದ್ದಾಳೆ. ಶೀಘ್ರದಲ್ಲೇ ಅವರು ಆಕೆಗಾಗಿ ಮನೆಯಲ್ಲಿ ತಯಾರಿಸಿದ ಊಟವನ್ನು ತಂದು ಕೊಟ್ಟಿದ್ದಾರೆ. ಮೊಸರು, ಬ್ರೆಡ್, ಬೆಂಡೆಕಾಯಿ, ಪಾಲಕ್ ಒಳಗೊಂಡಿರುವ ಊಟವನ್ನು ಬ್ಲೇಕ್ ಗೆ ಅಫ್ಘನ್ ಕುಟುಂಬ ಕಳುಹಿಸಿಕೊಟ್ಟಿದೆ.
ಈ ಚಿತ್ರಣವನ್ನು ಬ್ಲೇಕ್ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ಟ್ವಿಟ್ಟರ್‌ನಲ್ಲಿ 56,000 ಕ್ಕೂ ಹೆಚ್ಚು ಲೈಕ್‌ಗಳು ಮತ್ತು ನೂರಾರು ಕಾಮೆಂಟ್‌ಗಳೊಂದಿಗೆ ವೈರಲ್ ಆಗಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ನೆರೆಹೊರೆಯ ಅಫ್ಘಾನ್ ನಿವಾಸಿಗೆ ಸಾಕಷ್ಟು ಪ್ರಶಂಸೆ ಮತ್ತು ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.