alex Certify ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಬಯಲಾಯ್ತು ಬೆಚ್ಚಿಬೀಳಿಸುವ ಸಂಗತಿ…!

ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ತಾಯಿಯ ಪ್ರಿಯತಮ ಪದೇ ಪದೇ ಅತ್ಯಾಚಾರವೆಸಗಿದ ಪರಿಣಾಮ ಆಕೆ ಗರ್ಭಿಣಿಯಾದ ಬೆಚ್ಚಿ ಬೀಳಿಸುವ ಘಟನೆಯು ದುಂಡಿಗಲ್​ ಪ್ರದೇಶದಲ್ಲಿ ನಡೆದಿದೆ

12 ವರ್ಷದ ಬಾಲಕಿ ಹಾಗೂ ಆಕೆಯ ತಾಯಿ ಆರೋಪಿಯೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ತಾಯಿ ಹಾಗೂ ಆರೋಪಿ ಅಕ್ರಮ ಸಂಬಂಧ ಹೊಂದಿದ್ದು ಕಳೆದೊಂದು ದಶಕಗಳಿಂದ ಒಟ್ಟಿಗೆ ವಾಸವಿದ್ದರು.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಬಾಲಕಿಯು ಮನೆಯಲ್ಲಿ ಒಬ್ಬಳೇ ಇದ್ದಾಗಲೆಲ್ಲ ಆಕೆಗೆ ಬಲವಂತ ಮಾಡಿ ಆರೋಪಿಯು ಅತ್ಯಾಚಾರ ಎಸಗುತ್ತಿದ್ದ ಎನ್ನಲಾಗಿದೆ. ಅಲ್ಲದೇ ಈ ಬಗ್ಗೆ ತಾಯಿಯ ಬಳಿ ಮಾಹಿತಿ ಬಾಯ್ಬಿಟ್ಟರೆ ಜೀವಕ್ಕೆ ಅಪಾಯ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.

ಸಂತ್ರಸ್ತೆ ಗರ್ಭಿಣಿ ಎಂದು ತಿಳಿದಾಗ ಅನುಮಾನಗೊಂಡ ಆರೋಪಿ ನಿಜಾಂಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಿದ್ದಾನೆ.

ಆದರೆ, ಬಳಿಕ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದು, ವೈದ್ಯರು ಆಕೆಯ ಅನಾರೋಗ್ಯದ ಕಾರಣವನ್ನು ತಿಳಿದುಕೊಂಡು ತಾಯಿಗೆ ತಿಳಿಸಿದಾಗ ಬಾಲಕಿ ಇಡೀ ಘಟನೆಯನ್ನು ಬಹಿರಂಗಪಡಿಸಿದ್ದಾಳೆ.

ಸಂತ್ರಸ್ತೆ ದಾಖಲಿಸಿದ ದೂರಿನ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...