alex Certify ಅಪ್ಪು ಪಾಲಾಗಿದ್ದ ʼಕಾಂತಾರʼ ಸಿನಿಮಾ ರಿಷಬ್ ಗೆ ಸಿಕ್ಕಿದ್ದೇಗೆ…..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪು ಪಾಲಾಗಿದ್ದ ʼಕಾಂತಾರʼ ಸಿನಿಮಾ ರಿಷಬ್ ಗೆ ಸಿಕ್ಕಿದ್ದೇಗೆ…..? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಬಿಡುಗಡೆಗೆ ಸಿದ್ದವಾಗಿರುವ ಕಾಂತಾರ ಸಿನಿಮಾದ ಟ್ರೇಲರ್ ಹಾಗೂ ಹಾಡು ದೊಡ್ಡ ಸದ್ದು ಮಾಡ್ತಾ ಇದೆ.

ವಿಭಿನ್ನವಾಗಿರಬಹುದು ಸಿನಿಮಾ ಎಂದು ಕಮೆಟ್ ಕೂಡ ಬರುತ್ತಿದೆ.

ಆದರೆ ಈ ಸಿನಿಮಾ ಪಾತ್ರಗಳ ಆಯ್ಕೆ ಹಿಂದೆ ಒಂದು ರೋಚಕ‌ ಕಥೆ ಇದೆ. ರಿಷಬ್ ಗೂ ಮುನ್ನ ಈ ಪಾತ್ರಕ್ಕೆ ಅಭಿಮಾನಿಗಳ ದೇವರು ನಟಿಸಬೇಕಿತ್ತು.

ಹೌದು, ಈ ಸಿನಿಮಾದ ಮುಖ್ಯ ಪಾತ್ರವನ್ನು ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತಂತೆ. ಇಂಥದೊಂದು ವಿಚಾರವನ್ನು ಕೆ ಆರ್ ಜಿ ಫಿಲಂಸ್ ನ ಕಾರ್ತಿಕ್ ಗೌಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳು ಕೇಳಿದ ಪ್ರಶ್ನೆ ವೇಳೆ ಇಂಥದೊಂದು ವಿಚಾರ ಬೆಳಕಿಗೆ ಬಂದಿದೆ. ಅಭಿಮಾನಿಯೊಬ್ಬ ಈ ಸಿನಿಮಾದ ಒಂದು ತುಣುಕಾದ್ರೂ ಅಪ್ಪು ನೋಡಿದ್ದಾರಾ ಎಂದು ಕೇಳಿದ್ದಾರೆ.

ಈ ವೇಳೆ ಅವರ ಪ್ರಶ್ನೆಗೆ ಕಾರ್ತಿಕ್ ಉತ್ತರ ನೀಡಿದ್ದಾರೆ. ಅಪ್ಪು ಸರ್ ಕಾಂತಾರ ಸಿನಿಮಾದಲ್ಲಿ ಮೈನ್ ರೋಲ್ ನಲ್ಲಿ ನಟಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಕಾರಣ, ಅಪ್ಪು ಸರ್‌ ಗೆ ಈ ಸಿನಿಮಾ ಜೊತೆಗೆ ಮತ್ತೊಂದು ಸಿನಿಮಾದ ಡೇಟ್ಸ್ ಕ್ಲ್ಯಾಶ್ ಆಗುತ್ತಿದ್ದ ಕಾರಣ ಅವರು ಮಾಡಲು ಸಾಧ್ಯವಾಗಲಿಲ್ಲ. ಅಷ್ಟೆ ಅಲ್ಲ ಅವರೇ ರಿಷಬ್ ಶೆಟ್ಟಿ ಲೀಡ್‌ ಪಾತ್ರದಲ್ಲಿ ನಟಿಸಲಿ ಎಂದು ಸಲಹೆ ಕೊಟ್ಟರು ಎಂದು ಹೇಳಿದ್ದಾರೆ. ಇನ್ನು ಈ ಸಿನಿಮಾ ಸೆ.30ರಂದು ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...