ಬಿಡುಗಡೆಗೆ ಸಿದ್ದವಾಗಿರುವ ಕಾಂತಾರ ಸಿನಿಮಾದ ಟ್ರೇಲರ್ ಹಾಗೂ ಹಾಡು ದೊಡ್ಡ ಸದ್ದು ಮಾಡ್ತಾ ಇದೆ.
ವಿಭಿನ್ನವಾಗಿರಬಹುದು ಸಿನಿಮಾ ಎಂದು ಕಮೆಟ್ ಕೂಡ ಬರುತ್ತಿದೆ.
ಆದರೆ ಈ ಸಿನಿಮಾ ಪಾತ್ರಗಳ ಆಯ್ಕೆ ಹಿಂದೆ ಒಂದು ರೋಚಕ ಕಥೆ ಇದೆ. ರಿಷಬ್ ಗೂ ಮುನ್ನ ಈ ಪಾತ್ರಕ್ಕೆ ಅಭಿಮಾನಿಗಳ ದೇವರು ನಟಿಸಬೇಕಿತ್ತು.
ಹೌದು, ಈ ಸಿನಿಮಾದ ಮುಖ್ಯ ಪಾತ್ರವನ್ನು ಪುನೀತ್ ರಾಜ್ ಕುಮಾರ್ ಮಾಡಬೇಕಿತ್ತಂತೆ. ಇಂಥದೊಂದು ವಿಚಾರವನ್ನು ಕೆ ಆರ್ ಜಿ ಫಿಲಂಸ್ ನ ಕಾರ್ತಿಕ್ ಗೌಡ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಕೇಳಿದ ಪ್ರಶ್ನೆ ವೇಳೆ ಇಂಥದೊಂದು ವಿಚಾರ ಬೆಳಕಿಗೆ ಬಂದಿದೆ. ಅಭಿಮಾನಿಯೊಬ್ಬ ಈ ಸಿನಿಮಾದ ಒಂದು ತುಣುಕಾದ್ರೂ ಅಪ್ಪು ನೋಡಿದ್ದಾರಾ ಎಂದು ಕೇಳಿದ್ದಾರೆ.
ಈ ವೇಳೆ ಅವರ ಪ್ರಶ್ನೆಗೆ ಕಾರ್ತಿಕ್ ಉತ್ತರ ನೀಡಿದ್ದಾರೆ. ಅಪ್ಪು ಸರ್ ಕಾಂತಾರ ಸಿನಿಮಾದಲ್ಲಿ ಮೈನ್ ರೋಲ್ ನಲ್ಲಿ ನಟಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಕಾರಣ, ಅಪ್ಪು ಸರ್ ಗೆ ಈ ಸಿನಿಮಾ ಜೊತೆಗೆ ಮತ್ತೊಂದು ಸಿನಿಮಾದ ಡೇಟ್ಸ್ ಕ್ಲ್ಯಾಶ್ ಆಗುತ್ತಿದ್ದ ಕಾರಣ ಅವರು ಮಾಡಲು ಸಾಧ್ಯವಾಗಲಿಲ್ಲ. ಅಷ್ಟೆ ಅಲ್ಲ ಅವರೇ ರಿಷಬ್ ಶೆಟ್ಟಿ ಲೀಡ್ ಪಾತ್ರದಲ್ಲಿ ನಟಿಸಲಿ ಎಂದು ಸಲಹೆ ಕೊಟ್ಟರು ಎಂದು ಹೇಳಿದ್ದಾರೆ. ಇನ್ನು ಈ ಸಿನಿಮಾ ಸೆ.30ರಂದು ರಿಲೀಸ್ ಆಗುತ್ತಿದೆ. ಹೊಂಬಾಳೆ ಫಿಲಂಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.