alex Certify ಅಪ್ಪು ಇಲ್ಲ ಎಂಬ ನೋವು ಅರಗಿಸಿಕೊಳ್ಳಲಾಗದು; ನನ್ನ ಮಗನ್ನೇ ಕಳೆದುಕೊಂಡಂತಾಗಿದೆ; ಗದ್ಗದಿತರಾದ ಶಿವಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪು ಇಲ್ಲ ಎಂಬ ನೋವು ಅರಗಿಸಿಕೊಳ್ಳಲಾಗದು; ನನ್ನ ಮಗನ್ನೇ ಕಳೆದುಕೊಂಡಂತಾಗಿದೆ; ಗದ್ಗದಿತರಾದ ಶಿವಣ್ಣ

ಬೆಂಗಳೂರು: ಅಪ್ಪು ಇಲ್ಲವೆಂದು ಹೇಳಲು ತುಂಬಾ ಕಷ್ಟವಾಗುತ್ತಿದೆ. ಸಹೋದರ ಪುನೀತ್ ನಿಧನದಿಂದ ಬಹಳ ನೋವಾಗಿದೆ. ಆತ ಎಲ್ಲರ ಮನಸ್ಸಿನಲ್ಲಿಯೂ ಸದಾ ಇರುತ್ತಾನೆ ಎಂದು ನಟ ಶಿವರಾಜ್ ಕುಮಾರ್ ಕಣ್ಣೀರಿಟ್ಟಿದ್ದಾರೆ.

ಪುನೀತ್ ಅಂತ್ಯಕ್ರಿಯೆ ಬಳಿಕ ಸದಾಶಿವ ನಗರದ ನಿವಾಸದ ಬಳಿ ಮಾತನಾಡಿದ ಶಿವಣ್ಣ, ಪುನೀತ್ ನಿಧನದ ನೋವು ಅರಗಿಸಿಕೊಳ್ಳಲಾಗುತ್ತಿಲ್ಲ. ನನ್ನ ಮಗನನ್ನೇ ಕಳೆದುಕೊಂಡಂತಾಗಿದೆ. ಅಪ್ಪು ನನಗಿಂತ 13 ವರ್ಷ ಚಿಕ್ಕವನು. ಆತನನ್ನು ಮಗುವಿದ್ದಾಗಿನಿಂದ ಎತ್ತಿ ಬೆಳೆಸಿದ್ದೇನೆ. ಇಂದು ಆತ ಇಲ್ಲ ಎಂಬುದನ್ನು ಊಹಿಸಿಕೊಳ್ಳಲೂ ಆಗುತ್ತಿಲ್ಲ ಎಂದು ಗದ್ಗದಿತರಾದರು.

ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಿಸಲು ʼಅರಿಶಿನʼ ಚಹಾ ಸಹಕಾರಿ

ಪುನೀತ್ ಕುಟುಂಬದ ಜೊತೆ ಸದಾ ನಾವೆಲ್ಲರೂ ಇರುತ್ತೇವೆ. ಧೈರ್ಯತುಂಬುತ್ತೇವೆ ನಿಜ. ಆದರೆ ಆತನಿಲ್ಲದಿರುವುದು ಕುಟುಂಬಕ್ಕೆ ಯೋಚಿಸುವುದೂ ಕಷ್ಟ. ಅಪ್ಪು ಸದಾ ನಮ್ಮೆಲ್ಲರ ಜೊತೆ ಇರುತ್ತಾನೆ. ಆತ ಎಲ್ಲಿಯೂ ಹೋಗಿಲ್ಲ…ಅಭಿಮಾನಿಗಳು ಆತ್ಮಹತ್ಯೆಯಂತಹ ಆತುರದ ನಿರ್ಧಾರ ಯಾರೂ ಮಾಡಬಾರದು. ದು:ಖ ನಮಗೂ ಕೂಡ ಆಗಿದೆ. ಅಭಿಮಾನಿಗಳಿಗೂ ಆಘಾತವಾಗಿದೆ. ಹಾಗೆಂದು ಸಾಯುವುವಂತಹ ದುಡುಕಿನ ನಿರ್ಧಾರ ಬೇಡ. ನಿಮ್ಮ ಕುಟುಂಬಕ್ಕೆ ನೀವು ಮುಖ್ಯ. ನಿಮ್ಮ ಅಗತ್ಯವಿದೆ… ಎಲ್ಲವನ್ನೂ ಮರೆತು ಜೀವನ ಸಾಗಿಸಲೇಬೇಕು ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...