alex Certify ಅಪ್ಪಿತಪ್ಪಿಯೂ ಈ ಪದಾರ್ಥಗಳೊಂದಿಗೆ ಮೊಸರು ತಿನ್ನಬೇಡಿ, ಆರೋಗ್ಯಕ್ಕೆ ಆಗಬಹುದು ಅಪಾಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿಯೂ ಈ ಪದಾರ್ಥಗಳೊಂದಿಗೆ ಮೊಸರು ತಿನ್ನಬೇಡಿ, ಆರೋಗ್ಯಕ್ಕೆ ಆಗಬಹುದು ಅಪಾಯ….!  

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ನಾವು ಅನೇಕ ಪದಾರ್ಥಗಳನ್ನು ಸೇವನೆ ಮಾಡುತ್ತೇವೆ. ಈ ಋತುವಿನಲ್ಲಿ ಮೊಸರಿನ ಬಳಕೆ ತುಂಬಾ ಹೆಚ್ಚು. ಮೊಸರಿನಿಂದ ಮಾಡಿದ ಲಸ್ಸಿ, ರಾಯ್ತ ಸೇರಿದಂತೆ ಬಹುತೇಕ ಎಲ್ಲಾ ತಿನಿಸುಗಳೂ ಇಷ್ಟವಾಗುತ್ತವೆ.

ಬೇಸಿಗೆಯಲ್ಲಿ ಮೊಸರು ನಿಮಗೆ ತುಂಬಾ ಪ್ರಯೋಜನಕಾರಿಯಾದರೂ ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಬಹುತೇಕರು ಮೊಸರು ಮತ್ತು ಈರುಳ್ಳಿಯನ್ನು ಬೆರೆಸಿ ತಿನ್ನಲು ಇಷ್ಟಪಡುತ್ತಾರೆ. ಆದರೆ ಇದು ನಿಮ್ಮ ದೇಹಕ್ಕೆ ಬಹಳಷ್ಟು ಹಾನಿಯನ್ನುಂಟುಮಾಡುತ್ತದೆ. ಇನ್ನೂ ಕೆಲವು ಪದಾರ್ಥಗಳೊಂದಿಗೆ ಮೊಸರನ್ನು ಬೆರೆಸುವಂತಿಲ್ಲ.

ಮಾವಿನ ಹಣ್ಣಿನೊಂದಿಗೆ ಮೊಸರು… ಬೇಸಿಗೆಯಲ್ಲಿ ಮಾವಿನಹಣ್ಣಿನ ಮಿಲ್ಕ್‌ ಶೇಕ್‌ ಕುಡಿಯಲು ತುಂಬಾ ರುಚಿಕರವೆನಿಸುತ್ತದೆ. ಆದರೆ ಮೊಸರು ಮತ್ತು ಮಾವಿನ ಹಣ್ಣನ್ನು ಬೆರೆಸಬೇಡಿ. ಮೊಸರು ಮತ್ತು ಮಾವಿನಹಣ್ಣಿನ ಸಂಯೋಜನೆ ನಿಮ್ಮ ದೇಹಕ್ಕೆ ಹಾನಿ ಮಾಡುತ್ತದೆ.

ಬಿಸಿ ಪದಾರ್ಥಗಳೊಂದಿಗೆ ಮೊಸರು ತಿನ್ನಬೇಡಿಮೊಸರು ದೇಹದಲ್ಲಿ ಶೀತಕವಾಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ನೀವು ಬಿಸಿಯಾದ ಪದಾರ್ಥದೊಂದಿಗೆ ಮೊಸರನ್ನು ಸೇರಿಸಿ ತಿನ್ನಬೇಡಿ. ತಣ್ಣನೆಯ ಮತ್ತು ಬಿಸಿಯಾದ ಪದಾರ್ಥಗಳನ್ನು ಒಟ್ಟಿಗೆ ತಿನ್ನುವುದು ನಿಮ್ಮ ಹಲ್ಲುಗಳಿಗೆ ಹಾನಿ ಮಾಡುತ್ತದೆ.

ಉದ್ದಿನ ಬೇಳೆ ಮತ್ತು ಮೊಸರು…
ಮೊಸರು ಮತ್ತು ಉದ್ದಿನಬೇಳೆಯನ್ನು ಒಟ್ಟಿಗೆ ತಿನ್ನುವುದು ಹಾನಿಕಾರಕ. ಇದರಿಂದ ದೇಹದಲ್ಲಿ ಅಸಿಡಿಟಿ ಉಂಟಾಗುತ್ತದೆ. ಹೊಟ್ಟೆ ಉಬ್ಬರಿಸುವುದು  ಲೂಸ್ ಮೋಷನ್ ಇತ್ಯಾದಿ ಸಮಸ್ಯೆಗಳು ಉದ್ಭವಿಸಬಹುದು. ನೀವು ತಿನ್ನಲು ಬಯಸಿದರೆ, ಎರಡನ್ನೂ ಒಟ್ಟಿಗೆ ತಿನ್ನಬೇಡಿ ಮತ್ತು ಎರಡನ್ನೂ ತಿನ್ನುವಾಗ ಸ್ವಲ್ಪ ಸಮಯದ ಅಂತರವನ್ನು ಇಟ್ಟುಕೊಳ್ಳಿ.

ಮೊಸರು ಮತ್ತು ಮೀನು… 

ಮೊಸರು ಮತ್ತು ಮೀನನ್ನು ಒಟ್ಟಿಗೆ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಇದನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಹಾನಿಯುಂಟಾಗುತ್ತದೆ. ಮೀನು ಮತ್ತು ಮೊಸರನ್ನು ಒಟ್ಟಿಗೆ ಸೇವಿಸಿದರೆ ಅಜೀರ್ಣ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ಕೆಲವು ಪದಾರ್ಥಗಳೊಂದಿಗೆ ಮೊಸರನ್ನು ಬೆರೆಸಿ ತಿನ್ನುವುದರಿಂದ ಉಂಟಾಗುವ ಹಾನಿಯನ್ನು ಹೊರತುಪಡಿಸಿದ್ರೆ ಮೊಸರು ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮೊಸರು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದು ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಜೊತೆಗೆ ನಿಮ್ಮ ಹೃದಯವೂ ಆರೋಗ್ಯವಾಗಿರುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...