alex Certify ಅಪಾರ್ಟ್​ಮೆಂಟ್​ನಲ್ಲಿ ʼಭೂತʼ ಕಂಡು ಮಹಿಳೆಗೆ ಶಾಕ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾರ್ಟ್​ಮೆಂಟ್​ನಲ್ಲಿ ʼಭೂತʼ ಕಂಡು ಮಹಿಳೆಗೆ ಶಾಕ್…!

ತನ್ನ ಮನೆಯಲ್ಲಿ ವಿಚಿತ್ರವಾದ ಜೀವಿಯೊಂದು ಇರೋದನ್ನ ನೋಡಿ ಶಾಕ್​ ಆಗಿದ್ದಾಳೆ ಮಹಿಳೆ. ಟಿಕ್​ಟಾಕ್​ ಬಳಕೆದಾರೆಯಾದ ಸಾರಾ ಎಂಬವರು ಈ ವಿಡಿಯೋವನ್ನ ಟಿಕ್​ಟಾಕ್​​​ನಲ್ಲಿ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಫ್ಲಾಟ್​ನಲ್ಲಿ ಕಂಡಂತಹ ವಿಚಿತ್ರ ಅನುಭವವನ್ನ ಹೇಳಿಕೊಂಡಿದ್ದಾರೆ.

ಇದೊಂದು ವಿಶೇಷವಾದ ತಂತ್ರಜ್ಞಾನವಾಗಿದ್ದು, ಕೊರೊನಾ ಸಂದರ್ಭದಲ್ಲಿ ಮನೆಯಲ್ಲೇ ಕುಳಿತು ಬಾಡಿಗೆ ಮನೆಗಳನ್ನ ಪರೀಕ್ಷೆ ಮಾಡಲು ಜನರಿಗೆ ಅವಕಾಶ ನೀಡಲಾಗುತ್ತದೆ. ಇದೇ ತಂತ್ರಜ್ಞಾನವನ್ನ ಬಳಸಿ ಸಾರಾ ಮನೆಯನ್ನ ನೋಡುತ್ತಿದ್ದ ವೇಳೆ ಅಡುಗೆ ಮನೆ ಹಾಗೂ ಕಿಟಕಿಗಳನ್ನ ನೋಡಿದ್ದಾಳೆ.

ಮಲಗುವ ಕೋಣೆಯನ್ನ ನೋಡಿದ ವೇಳೆ ಅಲ್ಲಿ ಅನಿರೀಕ್ಷಿತ ಅನುಭವವಾಗಿದೆ. ಮಲಗುವ ಕೋಣೆಯಲ್ಲಿ ಯಾರೋ ಅಪರಿಚಿತ ಮಹಿಳೆ ಮಲಗಿರೋದನ್ನ ಗಮನಿಸಿದ್ದಾಳೆ. ಕ್ಷಣಾರ್ಧದಲ್ಲೇ ಆ ಅಕೃತಿ ಮಾಯವಾಗಿದೆ.

ಅಪಾರ್ಟ್​ಮೆಂಟ್​​​ ಸುಸಜ್ಜಿತವಾಗಿದ್ದು, ಮೈಕ್ರೋವೇವ್, ಸೋಫಾ ಸೇರಿದಂತೆ ಎಲ್ಲಾ ಸೌಲಭ್ಯಗಳಿವೆ. ಈ ವಿಡಿಯೋವನ್ನ ಟಿಕ್​ಟಾಕ್​ನಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 820000 ಹೆಚ್ಚು ವೀವ್ಸ್​ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...