ದೇಶದಲ್ಲಿ ಕೊರೊನಾ ರೂಪಾತರಿ ಓಮಿಕ್ರಾನ್ ನ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದಾಗಿ ತಜ್ಞರು ಸಾಕಷ್ಟು ಸಂದೇಶಗಳನ್ನು ನೀಡುತ್ತಿದ್ದಾರೆ.
ಸದ್ಯ ಕೇರಳ ಕೊರೊನಾ ಪರಿಣಿತರ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಅಪಾಯ ತಪ್ಪಿಸಲು ದೇಶದ ಮುಂದೆ ಕೇವಲ ಒಂದು ತಿಂಗಳ ಅವಧಿ ಉಳಿದಿದೆ. ಅಷ್ಟರಲ್ಲಿ ಓಮಿಕ್ರಾನ್ ನ ಹಾವಳಿ ತಡೆಗಟ್ಟಲು ಸರ್ಕಾರ ಸಿದ್ಧವಾಗಬೇಕು ಎಂದು ಎಚ್ಚರಿಸಿದೆ.
ತಜ್ಞರ ಅಭಿಪ್ರಾಯದಂತೆ ಓಮಿಕ್ರಾನ್ ಪ್ರಕರಣಗಳು ಎರಡು ತಿಂಗಳಲ್ಲಿಯೇ ಒಂದು ಮಿಲಿಯನ್ ವರೆಗೆ ಮುಟ್ಟಬಹುದು. ಸದ್ಯ ಜಗತ್ತಿನಲ್ಲಿನ ಓಮಿಕ್ರಾನ್ ಕೇಸ್ ಗಳನ್ನು ಕಂಡರೆ ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಸೃಷ್ಟಿಯಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.
ರಾಜಸ್ತಾನದಲ್ಲಿ 21 ಹೊಸ ಪ್ರಕರಣ, 43 ಕ್ಕೇರಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ
ಹೀಗಾಗಿ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಓಮಿಕ್ರಾನ್ ಬರದಂತೆ ತಡೆಗಟ್ಟಲು ನಮ್ಮ ಮುಂದೆ ಇರುವುದು ಇನ್ನು ಕೇವಲ ಒಂದು ತಿಂಗಳು ಮಾತ್ರ ಎಂದು ತಜ್ಞರು ಹೇಳಿದ್ದಾರೆ.
ಜನವರಿ ತಿಂಗಳಲ್ಲಿ ಜಗತ್ತಿನಲ್ಲಿ ಸೃಷ್ಟಿಯಾಗಿರುವ ಸನ್ನಿವೇಶ ದೇಶದಲ್ಲಿಯೂ ಉಂಟಾಗಬಹುದು ಎಂಬ ನಿರೀಕ್ಷೆ ಇದ್ದು, ಮೂರನೇ ಅಲೆ ದೊಡ್ಡ ಮಟ್ಟಕ್ಕೆ ಹೋಗುವ ಸಾಧ್ಯತೆ ಇದೆ. ಆದರೆ, ಅಪಾಯ ಎರಡನೇ ಅಲೆಯಷ್ಟು ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.