alex Certify ಅಪಾಯಕಾರಿ ಸ್ಟಂಟ್ ಪ್ರಯತ್ನಿಸಿದ ʼಬೈಕ್‌ ಬಾಬಾʼನಿಗೆ ಬಿತ್ತು ಭಾರಿ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯಕಾರಿ ಸ್ಟಂಟ್ ಪ್ರಯತ್ನಿಸಿದ ʼಬೈಕ್‌ ಬಾಬಾʼನಿಗೆ ಬಿತ್ತು ಭಾರಿ ದಂಡ

ವ್ಯಕ್ತಿಯೊಬ್ಬರು ಅಪಾಯಕಾರಿ ಬೈಕ್ ಸ್ಟಂಟ್‌ ಮಾಡಿರೋ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋ ಉತ್ತರ ಪ್ರದೇಶದ ಗಾಜಿಯಾಬಾದ್‌ನದ್ದು ಎಂದು ಹೇಳಲಾಗಿದೆ.

ಮಧ್ಯವಯಸ್ಕ ವ್ಯಕ್ತಿಯೊಬ್ಬ ತನ್ನ ಬೈಕ್‌ನಲ್ಲಿ ನಾಟಕೀಯ ಸಾಹಸಗಳನ್ನು ಮಾಡಿದ್ದಾನೆ. ರಸ್ತೆಯಲ್ಲಿ ಪಲ್ಸರ್ ಬೈಕ್ ಓಡಿಸುತ್ತಾ ಆತ ಭಯಾನಕ ಸ್ಟಂಟ್ ಮಾಡಿದ್ದಾನೆ. ಬೈಕ್‌ ಚಲಿಸುತ್ತಿದ್ರೆ, ಆತ ಅದರ ಹಿಂದೆ ನಿಂತುಕೊಂಡಿದ್ದಾನೆ. ನಂತರ ತನ್ನ ಕಾಲುಗಳಿಂದ ಬೈಕ್ ಓಡಿಸಿದ್ದಾನೆ.

ಪ್ರಯಾಣದುದ್ದಕ್ಕೂ ಆತನ ಬೈಕ್‌ ಸಂಪೂರ್ಣ ಹಿಡಿತದಲ್ಲಿರುವುದರಿಂದ ವ್ಯಕ್ತಿಯು ಸ್ಟಂಟ್ ಮಾಡುವುದರಲ್ಲಿ ಸಾಕಷ್ಟು ಸಾಧಕರಾಗಿದ್ದಾರೆಂದು ತೋರುತ್ತದೆ. ಆದರೆ, ಏನಾದ್ರೂ ಅವಘಡ ಸಂಭವಿಸಿದ್ರೆ ಯಾರು ಜವಾಬ್ದಾರಿ ಅನ್ನೋದು ನಾಗರಿಕರ ಪ್ರಶ್ನೆ.

ಈ ವಿಡಿಯೋ ವೈರಲ್ ಆದ ನಂತರ, ಘಾಜಿಯಾಬಾದ್ ಪೊಲೀಸರು ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಯಾವುದೇ ಸುರಕ್ಷತಾ ಸಾಧನವಿಲ್ಲದೆ ಬೈಕ್ ಸ್ಟಂಟ್ ಮಾಡಿದ್ದಕ್ಕೆ 26,500 ರೂ.ಗಳ ದಂಡ ವಿಧಿಸಲಾಗಿದೆ. ವರದಿಯ ಪ್ರಕಾರ, ಈ ವ್ಯಕ್ತಿಯನ್ನು ಬೈಕ್ ಬಾಬಾ ಎಂದೇ ಕರೆಯಲಾಗುತ್ತದೆಯಂತೆ.

ಇಂತಹ ಸಾಹಸಗಳು ಅಪಾಯಕಾರಿಯಾಗಿದ್ದು, ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ವೈರಲ್ ಆಗುವ ಹುಚ್ಚು ಕನಸಿನಿಂದ, ಅನೇಕ ಜನರು ಇಂತಹ ಅಪಾಯಕಾರಿ ಸಾಹಸಗಳನ್ನು ಪ್ರಯತ್ನಿಸಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

— Zee News (@ZeeNews) April 28, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...