
ಮಧ್ಯವಯಸ್ಕ ವ್ಯಕ್ತಿಯೊಬ್ಬ ತನ್ನ ಬೈಕ್‌ನಲ್ಲಿ ನಾಟಕೀಯ ಸಾಹಸಗಳನ್ನು ಮಾಡಿದ್ದಾನೆ. ರಸ್ತೆಯಲ್ಲಿ ಪಲ್ಸರ್ ಬೈಕ್ ಓಡಿಸುತ್ತಾ ಆತ ಭಯಾನಕ ಸ್ಟಂಟ್ ಮಾಡಿದ್ದಾನೆ. ಬೈಕ್ ಚಲಿಸುತ್ತಿದ್ರೆ, ಆತ ಅದರ ಹಿಂದೆ ನಿಂತುಕೊಂಡಿದ್ದಾನೆ. ನಂತರ ತನ್ನ ಕಾಲುಗಳಿಂದ ಬೈಕ್ ಓಡಿಸಿದ್ದಾನೆ.
ಪ್ರಯಾಣದುದ್ದಕ್ಕೂ ಆತನ ಬೈಕ್ ಸಂಪೂರ್ಣ ಹಿಡಿತದಲ್ಲಿರುವುದರಿಂದ ವ್ಯಕ್ತಿಯು ಸ್ಟಂಟ್ ಮಾಡುವುದರಲ್ಲಿ ಸಾಕಷ್ಟು ಸಾಧಕರಾಗಿದ್ದಾರೆಂದು ತೋರುತ್ತದೆ. ಆದರೆ, ಏನಾದ್ರೂ ಅವಘಡ ಸಂಭವಿಸಿದ್ರೆ ಯಾರು ಜವಾಬ್ದಾರಿ ಅನ್ನೋದು ನಾಗರಿಕರ ಪ್ರಶ್ನೆ.
ಈ ವಿಡಿಯೋ ವೈರಲ್ ಆದ ನಂತರ, ಘಾಜಿಯಾಬಾದ್ ಪೊಲೀಸರು ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಯಾವುದೇ ಸುರಕ್ಷತಾ ಸಾಧನವಿಲ್ಲದೆ ಬೈಕ್ ಸ್ಟಂಟ್ ಮಾಡಿದ್ದಕ್ಕೆ 26,500 ರೂ.ಗಳ ದಂಡ ವಿಧಿಸಲಾಗಿದೆ. ವರದಿಯ ಪ್ರಕಾರ, ಈ ವ್ಯಕ್ತಿಯನ್ನು ಬೈಕ್ ಬಾಬಾ ಎಂದೇ ಕರೆಯಲಾಗುತ್ತದೆಯಂತೆ.
ಇಂತಹ ಸಾಹಸಗಳು ಅಪಾಯಕಾರಿಯಾಗಿದ್ದು, ಗಂಭೀರ ಅಪಘಾತಗಳಿಗೆ ಕಾರಣವಾಗಬಹುದು. ವೈರಲ್ ಆಗುವ ಹುಚ್ಚು ಕನಸಿನಿಂದ, ಅನೇಕ ಜನರು ಇಂತಹ ಅಪಾಯಕಾರಿ ಸಾಹಸಗಳನ್ನು ಪ್ರಯತ್ನಿಸಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.