alex Certify ‘ಅಪರೂಪ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಪರೂಪ’ ಚಿತ್ರದ ವಿಡಿಯೋ ಸಾಂಗ್ ರಿಲೀಸ್

ಮಹೇಶ್ ಬಾಬು ನಿರ್ದೇಶನದ ಬಹುನಿರೀಕ್ಷಿತ ‘ಅಪರೂಪ’ ಚಿತ್ರದ ‘ಅನಿಸಿದೆ ಏಕೋ’ ಎಂಬ ರೋಮ್ಯಾಂಟಿಕ್ ಮೆಲೋಡಿ ಹಾಡೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಅರ್ಮನ್ ಮಲ್ಲಿಕ್ ಹಾಗೂ ಸಂಗೀತಾ ರವೀಂದ್ರನಾಥ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ  ಪಡೆದಿದ್ದು, ಪ್ರಜ್ವಲ್ ಪಾಯ್ ಸಂಗೀತಕ್ಕೆ ಗಾನ ಪ್ರಿಯರು ಫಿದಾ ಆಗಿದ್ದಾರೆ.

ಸುಗ್ಗಿ ಸಿನಿಮಾಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ಕೆಆರ್ ಮಹೇಶ್ ನಿರ್ಮಾಣ ಮಾಡಿದ್ದು, ಸುಘೋಷ್ ಸೇರಿದಂತೆ ರಿತಿಕಾ ಶ್ರೀನಿವಾಸ್, ಅರುಣ ಬಾಲರಾಜ್, ಅವಿನಾಶ್  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿರುವ  ಚಿತ್ರತಂಡ ಶೀಘ್ರದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲು ಸಿದ್ಧವಾಗಿದೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...