alex Certify ‘ಅಪರೂಪ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಅಪರೂಪ’ ಚಿತ್ರದ ಲಿರಿಕಲ್ ವಿಡಿಯೋ ರಿಲೀಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಟೀಸರ್ ಮೂಲಕವೇ ಸಾಕಷ್ಟು ಸೌಂಡ್ ಮಾಡುತ್ತಿರುವ ಮಹೇಶ್ ಬಾಬು ನಿರ್ದೇಶನದ ಸುಘೋಶ್ ನಟನೆಯ ಬಹುನಿರೀಕ್ಷಿತ ‘ಅಪರೂಪ’ ಚಿತ್ರದ ಲಿರಿಕಲ್ ಸಾಂಗ್ ವೊಂದನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡು ಯೂಟ್ಯೂಬ್ ನಲ್ಲಿ ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ  ಭರ್ಜರಿ ವೀಕ್ಷಣೆ ಪಡೆದಿದೆ. ‘ಯು ಆರ್ ಮೈ ಕರೀನಾ’ ಎಂಬ ಈ ಹಾಡಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಧ್ವನಿ ನೀಡಿದ್ದರು, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಪ್ರಜ್ವಲ್ ಪೈ ಸಂಗೀತ ಸಂಯೋಜನೆ ನೀಡಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕೈಯಲ್ಲಿ ಈ ಹಾಡನ್ನು ಲಾಂಚ್ ಮಾಡಿಸಲಾಗಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ದೊರೆತಿದೆ. ಸುಗ್ಗಿ ಸಿನಿಮಾಸ್ ಸ್ಟುಡಿಯೋ ಬ್ಯಾನರ್ ನಡಿ ಕೆಆರ್ ರಮೇಶ್ ನಿರ್ಮಾಣ ಮಾಡಿದ್ದು ಸುಘೋಷ್ ಸೇರಿದಂತೆ ರಿತಿಕ ಶ್ರೀನಿವಾಸ್ ಅರುಣ ಬಾಲರಾಜ್ ಅವಿನಾಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...