alex Certify ಅಪರಿಚಿತ ವಾಹನ ಡಿಕ್ಕಿ; ಗರ್ಭಿಣಿ ಹಸು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರಿಚಿತ ವಾಹನ ಡಿಕ್ಕಿ; ಗರ್ಭಿಣಿ ಹಸು ಸಾವು

ಶಿವಮೊಗ್ಗ: ಇಂದು ಬೆಳಿಗ್ಗೆ ನಗರದ ಬೈಪಾಸ್ ರಸ್ತೆಯ ಕಿಯಾ ಶೋರೂಮ್‌ ಬಳಿ ಅಪರಿಚಿತ ವಾಹನವೊಂದು ತುಂಬು ಗರ್ಭಿಣಿ ಹಸುವೊಂದಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಹಸು ಸ್ಥಳದಲ್ಲೆ ಒದ್ದಾಡಿ ಮೃತಪಟ್ಟಿದೆ.

ಸ್ಥಳೀಯರು ಪಾಲಿಕೆಯ ಗಮನಕ್ಕೆ ತಂದು ಪಾಲಿಕೆ ವತಿಯಿಂದ ಹಸುವಿನ ಅಂತ್ಯಸಂಸ್ಕಾರಕ್ಕೆ ಕ್ರಮ ಕೈಗೊಳ್ಳಲಾಗಿದೆ.

ವಾಹನ ಚಾಲಕನ ಅಮಾನವೀಯ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...