alex Certify ಅಪರಿಚಿತ ಮಹಿಳೆ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರಿಚಿತ ಮಹಿಳೆ ಸಾವು

ಶಿವಮೊಗ್ಗ ನಗರದ ಗುಂಡಪ್ಪ ಶೆಡ್‍ನ ದೇವಸ್ಥಾನದ ಬಳಿ ನಿತ್ರಾಣವಾಗಿ ಬಿದ್ದಿದ್ದ ಸುಮಾರು 70 ರಿಂದ 75 ವಯಸ್ಸಿನ ನಾಗಮ್ಮ ಎಂಬ ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸೆ.23 ರಂದು ಮೃತಪಟ್ಟಿರುತ್ತಾರೆ.

ವಿಳಾಸ ಮತ್ತು ವಾರಸುದಾರರು ಯಾರೆಂದು ತಿಳಿಯದ ಮೃತಳು ಸುಮಾರು 5.2 ಅಡಿ ಎತ್ತರ, ತೆಳುವಾದ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ತಲೆಯಲ್ಲಿ 8 ಇಂಚು ಉದ್ದದ ಬಿಳಿ ಮತ್ತು ಕಪ್ಪು ಕೂದಲು, ಎಡ ಕೆನ್ನೆಯ ಕೆಳಭಾಗದಲ್ಲಿ ಕಪ್ಪು ಮಚ್ಚೆ ಇರುತ್ತದೆ. ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಈಕೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ದೂ.ಸಂ: 08182-261400, ಪೊಲೀಸ್ ಉಪಾಧೀಕ್ಷಕರು 08182-261404 ಅಥವಾ ಕೋಟೆ ಪೊಲೀಸ್ ಠಾಣೆ ಶಿವಮೊಗ್ಗ ದೂ.ಸಂ: 08182-261415 ಇವರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...