
ಹೆಚ್ಚಿನ ಸಂಖ್ಯೆಯಲ್ಲಿ ನೆರೆದ ಸ್ಥಳೀಯರು, ಅಪಘಾತಕ್ಕೀಡಾದ ಟ್ರಕ್‌ಗಳಲ್ಲಿ ಆಹಾರ ಪದಾರ್ಥಗಳಿದ್ದ ಗೋಣಿಚೀಲಗಳನ್ನು ಹೊತ್ತೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವರದಿಗಳ ಪ್ರಕಾರ, ಗ್ರಾಮಸ್ಥರು ಲಾರಿಯಿಂದ 900ಕ್ಕೂ ಹೆಚ್ಚು ಗೋಣಿಚೀಲಗಳನ್ನು ತೆಗೆದುಕೊಂಡು ಹೋಗಿದ್ದಾರೆ. ವಿಡಿಯೋದಲ್ಲಿ, ಕೆಲವರು ಟ್ರಕ್‌ನ ಮೇಲಿಂದ ಚೀಲಗಳನ್ನು ಎಸೆಯುತ್ತಿರುವುದು ಕಂಡುಬಂದರೆ, ಇತರರು ಅವುಗಳನ್ನು ರಸ್ತೆಯಿಂದ ಎತ್ತಿಕೊಂಡು ಹಳ್ಳಿ ಅಥವಾ ಮಾರುಕಟ್ಟೆಗಳತ್ತ ತೆರಳುತ್ತಿರುವ ದೃಶ್ಯ ಕಂಡುಬಂದಿದೆ.
ಕಳ್ಳತನವಾಗಿರುವ ವರದಿಗಳು ಬೆಳಕಿಗೆ ಬರುತ್ತಿದ್ದಂತೆ, ಟ್ರಕ್‌ಗಳ ಮಾಲೀಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಕಳ್ಳತನ ಮತ್ತು ಅಪಘಾತದ ಪ್ರಕರಣವನ್ನು ದಾಖಲಿಸಲಾಗಿದ್ದು, ಕದ್ದ ಎಲ್ಲಾ ವಸ್ತುಗಳನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.