ರಸ್ತೆಯಲ್ಲಿ ವಾಹನ ಓಡಿಸೋವಾಗ ಕೆಲವರು ಮಾಡುವ ತಪ್ಪುಗಳಿಂದಾಗಿ ಕೆಲವೊಮ್ಮೆ ಸ್ವತಃ ಅವರು, ಇನ್ನೂ ಕೆಲವೊಮ್ಮೆ ಏನೂ ಮಾಡದ ಅಮಾಯಕರು ಬೆಲೆ ತೆರಬೇಕಾಗುತ್ತದೆ. ಇಂಥ ತಪ್ಪುಗಳನ್ನು ಮಾಡಬಾರದೆಂಬ ಅರಿವಿದ್ದರೂ ಮತ್ತೆ ಮತ್ತೆ ಘಟಿಸುತ್ತವೆ.
ಹುಚ್ಚರ ಹಾಗೆ ವಾಹನ ಓಡಿಸುವುದು ಅನೇಕ ಬಾರಿ ಅಪಘಾತಕ್ಕೆ ಆಹ್ವಾನ ನೀಡುತ್ತೆ. ಲೇನ್ ಶಿಸ್ತು ಪಾಲನೆ ಮಾಡದೇ ಹೋದರೆ ವಾಹನಗಳು ಡಿಕ್ಕಿ ಹೊಡೆಯುವುದು ಸಾಮಾನ್ಯ.
ಮನ ಮಿಡಿಯುವಂತಿದೆ ವೃದ್ಧೆಯ ಅಂತಿಮ ಆಸೆಯನ್ನು ಆಸ್ಪತ್ರೆ ಸಿಬ್ಬಂದಿ ಪೂರ್ಣಗೊಳಿಸಿದ ಕ್ಷಣ…..!
ಗ್ರೀನ್ ಸಿಗ್ನಲ್ ಇದ್ದಾಗಲೇ ರೋಡ್ ಕ್ರಾಸ್ ಮಾಡುವುದು ಕೆಲವರಿಗೆ ರೂಢಿ. ಹೀಗಾದರೆ ವಾಹನ ಬಂದು ಗುದ್ದುವ ಸಾಧ್ಯತೆ ಹೆಚ್ಚು.
ವಾಹನ ಓಡಿಸುತ್ತಾ ಮೆಸೇಜ್ ಮಾಡುವುದು ನಮ್ಮಲ್ಲಿ ಸಾಮಾನ್ಯ. ಇದರಿಂದ ಅಪಘಾತ ಸರ್ವೇ ಸಾಮಾನ್ಯ.
ದೊಡ್ಡದಾಗಿ ಮ್ಯೂಸಿಕ್ ಹಚ್ಚಿಕೊಂಡು ಗಾಡಿ ಓಡಿಸುವುದನ್ನೂ ನಾವು ನೋಡಿರುತ್ತೇವೆ. ಆದರೆ ಇದೂ ಕೂಡ ಸುರಕ್ಷತೆ ದೃಷ್ಟಿಯಿಂದ ಸರಿಯಲ್ಲ.
ಅಂಬುಲೆನ್ಸ್ ಗೆ ದಾರಿ ಬಿಡದಿರುವುದು ಹಾಗೂ ಅಂಬುಲೆನ್ಸ್ ಅನ್ನು ಫಾಲೋ ಮಾಡುವುದು ಅನೇಕರ ತಪ್ಪು ರೂಢಿ.
ಫುಟ್ ಪಾತ್ ಮೇಲೆ ಬೈಕ್ ಓಡಿಸುವುದು ಎಷ್ಟು ತಪ್ಪೋ ಅಷ್ಟೇ ಫುಟ್ ಪಾತ್ ಇರೋವಾಗಲೂ ರಸ್ತೆಯ ಮೇಲೆ ನಡೆಯೋದು. ಇದರಿಂದ ಅಪಘಾತಗಳು ಸಾಮಾನ್ಯ.
ಮಗಳ ಬಾಯ್ ಫ್ರೆಂಡ್ ಜೊತೆ ಓಡಿ ಹೋದ ತಾಯಿ….! ಗೆಳೆಯನ ತಂದೆ ಮದುವೆಯಾದ ಮಗಳು
ಎಡತುದಿಗಿರುವವರು ಸಡನ್ ಆಗಿ ಬಲಗಡೆ ಬಂದು ಯು ಟರ್ನ್ ತೆಗೆದುಕೊಳ್ಳುವುದು ನಮ್ಮಲ್ಲನೇಕರು ಮಾಡುವ ಇನ್ನೊಂದು ದೊಡ್ಡ ತಪ್ಪು.
ಯಾವಾಗಲೂ ಹೈಬೀಮ್ ನಲ್ಲಿಯೇ ಗಾಡಿ ಓಡಿಸುವುದರಿಂದ ಎದುರಿಗಿಂದ ಬರುವವರಿಗೆ ರಸ್ತೆಯೇ ಕಾಣೋಲ್ಲ ಎನ್ನುವ ಸಾಮಾನ್ಯ ಜ್ಞಾನ ಅನೇಕರಿಗೆ ಇರೋದೇ ಇಲ್ಲ.
ಕಾರ್ ನಲ್ಲೇ ಮೇಕಪ್ ಮಾಡಿಕೊಳ್ಳುವುದು ಮತ್ತೊಬ್ಬರ ಸಾವಿಗೆ ಕಾರಣವಾಗಬಹುದು.
ರೆಡ್ ಸಿಗ್ನಲ್ ಇದ್ದಾಗಲೂ ಸುಖಾಸುಮ್ಮನೆ ಹಾರ್ನ್ ಮಾಡುವುದು.
ಆಟೋ ರಿಕ್ಷಾಗಳು ಯಾವ ದಿಕ್ಕಿಗೆ ಬೇಕಾದರೂ ಹೇಗೆ ಬೇಕಾದರೂ ಇಂಡಿಕೇಶನ್ ನೀಡದೆಯೇ ಬಂದು ಬಿಡುವುದು.