ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಪುತ್ರ ಮಾಯಾಸ್ ಕುಂಬ್ಳೆ ಬರೆದ ಸಫಾರಿ ಸಾಗಾ – ವೈಲ್ಡ್ ಎನ್ಕೌಂಟರ್ಸ್ ಆಫ್ ಎ ಯಂಗ್ ಫೋಟೋಗ್ರಾಫರ್ ಕಾಫಿ ಟೇಬಲ್ ಪುಸ್ತಕವನ್ನು ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ಮನ್ ವಿವಿಎಸ್ ಲಕ್ಷ್ಮಣ್ ಹಾಗೂ ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಜಯಂತ್ ಶರ್ಮಾ ಲೋಕಾರ್ಪಣೆಗೊಳಿಸಿದ್ದಾರೆ.
2017ರ ಮೇ ತಿಂಗಳಲ್ಲಿ ರಣಥಂಬೋರ್ಗೆ ಪ್ರವಾಸಕ್ಕೆ ತೆರಳಿದ ಬಳಿಕ ನನ್ನ ಜೀವನವು ಶಾಶ್ವತವಾಗಿ ಬದಲಾಯಿತು ಎಂದು ಮಾಯಾಸ್ ಈ ಸಂದರ್ಭದಲ್ಲಿ ಹೇಳಿದರು.
ಅನಿಲ್ ಕುಂಬ್ಳೆ ಕೂಡ ಫೋಟೋಗ್ರಫಿ ವಿಭಾಗದಲ್ಲಿ ಆಸಕ್ತಿ ಹೊಂದಿದ್ದಾರೆ. ಅಪ್ಪ ಕೊಟ್ಟ ಕ್ಯಾಮರಾಗಳಿಂದ ಕಾಡಿನ ಸುಂದರ ಫೋಟೋಗಳನ್ನು ಸೆರೆಹಿಡಿದಿದ್ದ ಮಾಯಾಸ್ ಇದೀಗ ಅದೇ ಚಿತ್ರಗಳ ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ.
ಕಬಿನಿ ಅರಣ್ಯ ಪ್ರದೇಶದಲ್ಲಿರುವ ಕಪ್ಪು ಚಿರತೆಯ ಮೂಲಕ ಆರಂಭವಾಗುವ ಈ ಕೃತಿಯು ನದಿಯಲ್ಲಿರುವ ಹುಲಿ, ರಾಮನಗರದಲ್ಲಿ ಕ್ಲಿಕ್ಕಿಸಲಾದ ಆನೆ, ಕಾಡುಕೋಣ, ಸೀಳು ನಾಯಿ ಹಾಗೂ ವಿವಿಧ ಹಕ್ಕಿಗಳು ಹೀಗೆ ನಾನಾ ಫೋಟೋಗಳನ್ನು ಒಳಗೊಂಡಿದೆ.