alex Certify ಅತ್ಯಾಚಾರದ ನಕಲಿ ದೂರು ದಾಖಲಿಸುವುದನ್ನೇ ಚಾಳಿಯಾಗಿಸಿಕೊಂಡಿದ್ದ ಯುವತಿ ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರದ ನಕಲಿ ದೂರು ದಾಖಲಿಸುವುದನ್ನೇ ಚಾಳಿಯಾಗಿಸಿಕೊಂಡಿದ್ದ ಯುವತಿ ಅಂದರ್

22 ವರ್ಷದ ಯುವತಿಯನ್ನು ‘ಹನಿ-ಟ್ರ್ಯಾಪಿಂಗ್’ ಆರೋಪದ ಮೇಲೆ ಗುರುಗ್ರಾಮದ ಪೊಲೀಸರು ಬಂಧಿಸಿದ್ದಾರೆ. 22 ವರ್ಷದ ಈ ಯುವತಿ ಈ ಹಿಂದೆ ವಿವಿಧ ಠಾಣೆಗಳಲ್ಲಿ ಹಲವಾರು ಪುರುಷರ ವಿರುದ್ಧ ನಕಲಿ ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರ ತನಿಖೆ ಪ್ರಕಾರ, ಯುವತಿ ಎಂಟು ಪುರುಷರ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾಳೆ. ಬಿಎ (ಆನರ್ಸ್) ವಿದ್ಯಾರ್ಥಿಯಾಗಿದ್ದ ಆರೋಪಿಯನ್ನ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ನ್ಯಾಯಾಲಯ ನೀಡಿರುವ ತೀರ್ಪಿನಂತೆ ನ್ಯಾಯಾಂಗ ಬಂಧನದಲ್ಲಿರಿಸಿದ್ದಾರೆ.

ಯುವತಿಯ ತಾಯಿ ಮತ್ತು ನರೇಂದರ್ ಯಾದವ್ ಎನ್ನುವ ಇನ್ನೊಬ್ಬ ವ್ಯಕ್ತಿ ಈ ದಂಧೆಯಲ್ಲಿ ಭಾಗಿಯಾಗಿದ್ದರು. ಸಧ್ಯ ಇಬ್ಬರು ಪರಾರಿಯಾಗಿದ್ದಾರೆ. ಯುವತಿಯನ್ನ ಜೈಲಿಗೆ ಕಳುಹಿಸಲಾಗಿದ್ದು, ನಾವು ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ನಮ್ಮ ತಂಡಗಳು ಹುಡುಗಿಯ ತಾಯಿ ಮತ್ತು ಇನ್ನೊಬ್ಬ ಆರೋಪಿಯನ್ನು ಹಿಡಿಯಲು ಪ್ರಯತ್ನ ಮುಂದುವರೆಸಿದ್ದೇವೆ ಎಂದು ಎಸಿಪಿ ಪ್ರೀತ್ ಪಾಲ್ ಸಿಂಗ್ ಸಾಂಗ್ವಾನ್ ತಿಳಿಸಿದ್ದಾರೆ‌.

BIG NEWS: ಬಿಜೆಪಿ ದುರಾಡಳಿತಕ್ಕೆ ಜನ ಬೇಸತ್ತಿದ್ದಾರೆ; ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸಿದೆ ಎಂದ ಸಿದ್ದರಾಮಯ್ಯ

ಆರೋಪಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ಅಕ್ಟೋಬರ್‌ನಲ್ಲಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದರು. ರಾಜ್ಯ ಮಹಿಳಾ ಆಯೋಗವು ಈ ಹಿಂದೆಯೆ ಈ ಕೇಸ್ ಭೇದಿಸಲು, ಎಸ್‌ಐಟಿ ರಚನೆ ಮಾಡಿ ಎಂದು ಒತ್ತಾಯಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...