alex Certify ಅತಿ ಹೆಚ್ಚು ಸಿನಿಮಾ ವೀಕ್ಷಿಸೋ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ ಈ ವ್ಯಕ್ತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿ ಹೆಚ್ಚು ಸಿನಿಮಾ ವೀಕ್ಷಿಸೋ ಮೂಲಕ ಗಿನ್ನಿಸ್ ವಿಶ್ವ ದಾಖಲೆಗೆ ಪಾತ್ರರಾಗಿದ್ದಾರೆ ಈ ವ್ಯಕ್ತಿ….!

ಬಹುತೇಕ ಮಂದಿ ತಮ್ಮ ನೆಚ್ಚಿನ ಚಲನಚಿತ್ರಗಳನ್ನು ಲೆಕ್ಕವಿಲ್ಲದಷ್ಟು ಬಾರಿ ನೋಡಿರುತ್ತಾರೆ. ಒಂದೊಳ್ಳೆ ಚಿತ್ರವನ್ನು ಮತ್ತೆ ಮತ್ತೆ ವೀಕ್ಷಿಸುವುದರಿಂದ ಸಿಗುವ ಖುಷಿಯೇ ಬೇರೆ. ಆದರೆ, ನಿಮ್ಮ ನೆಚ್ಚಿನ ಸಿನಿಮಾವನ್ನು ಇಂತಿಷ್ಟೇ ಸಲ ವೀಕ್ಷಿಸಿರುವುದಾಗಿ ನಿಮ್ಮಲ್ಲಿ ಎಷ್ಟು ಮಂದಿ ಪೂರ್ಣ ವಿಶ್ವಾಸದಿಂದ ಹೇಳಬಹುದು..?

ಅಮೆರಿಕಾದ ಫ್ಲೋರಿಡಾ ಮೂಲದ ವ್ಯಕ್ತಿಯೊಬ್ಬರು ಅತಿ ಹೆಚ್ಚು ಸಿನಿಮಾ ವೀಕ್ಷಿಸಿದ್ದಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಟಾಮ್ ಹಾಲೆಂಡ್ ಅವರ ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಸಿನಿಮಾವನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ 292 ಬಾರಿ ವೀಕ್ಷಿಸಿದ್ದಾರೆ.

ರಾಮಿರೊ ಅಲಾನಿಸ್ ಅವರು ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಅನ್ನು 16 ಡಿಸೆಂಬರ್ 2021 ಮತ್ತು 15 ಮಾರ್ಚ್ 2022 ರ ನಡುವೆ 292 ಬಾರಿ ವೀಕ್ಷಿಸಿದ್ದಾರೆ. ರಾಮಿರೋ ಈ ದೊಡ್ಡ ಸಾಧನೆಯನ್ನು ಸಾಧಿಸಿರುವುದು ಇದೇ ಮೊದಲಲ್ಲ. ಅವರು ಈ ಹಿಂದೆ 2019 ರಲ್ಲಿ ಅವೆಂಜರ್ಸ್: ಎಂಡ್‌ಗೇಮ್‌ ಅನ್ನು 191 ಬಾರಿ ವೀಕ್ಷಿಸುವುದರೊಂದಿಗೆ ದಾಖಲೆ ಮಾಡಿದ್ದರು. ಆ ದಾಖಲೆಯನ್ನು 2021 ರಲ್ಲಿ ಅರ್ನಾಡ್ ಕ್ಲೈನ್ ​​ಎಂಬುವವರು ಮುರಿದಿದ್ದರು.

ಈ ಬಾರಿ ರಾಮಿರೊ ತನ್ನ ಅಜ್ಜಿ ಜುವಾನಿ ಗೌರವಾರ್ಥವಾಗಿ ಮತ್ತೊಮ್ಮೆ ದಾಖಲೆ ಮಾಡಲು ಪ್ರಯತ್ನಿಸಿದ್ದಾರೆ. ಸ್ಪೈಡರ್‌ಮ್ಯಾನ್ ಚಲನಚಿತ್ರವನ್ನು ಥಿಯೇಟರ್‌ಗಳು ತೋರಿಸುವುದನ್ನು ನಿಲ್ಲಿಸುವವರೆಗೂ ಅವರು ಬ್ಯಾಕ್-ಟು-ಬ್ಯಾಕ್ ಪ್ರದರ್ಶನಗಳನ್ನು ವೀಕ್ಷಿಸಿದ್ದಾರೆ. ಅವರು ಪ್ರತಿದಿನ ಚಲನಚಿತ್ರಮಂದಿರದಲ್ಲಿ ಐದು ಪ್ರದರ್ಶನಗಳನ್ನು ವೀಕ್ಷಿಸಿದ್ದರು.

My swing got to it’s end…🙌🏻❤️🕷

Thank you all.@TomHolland1996 @SonyPictures @jnwtts @ComicBook @GabyMeza8 #SpiderMan #SpiderManNoWayHome @MarvelStudios #marvel @GWR #TigreVengador @Zendaya #MCU #GWR #movies pic.twitter.com/GdujHslShN

— El Tigre Vengador (@agalanis17) March 15, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...