
ಅಮೆರಿಕಾದ ಫ್ಲೋರಿಡಾ ಮೂಲದ ವ್ಯಕ್ತಿಯೊಬ್ಬರು ಅತಿ ಹೆಚ್ಚು ಸಿನಿಮಾ ವೀಕ್ಷಿಸಿದ್ದಕ್ಕಾಗಿ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಟಾಮ್ ಹಾಲೆಂಡ್ ಅವರ ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಸಿನಿಮಾವನ್ನು ಕೇವಲ ಮೂರು ತಿಂಗಳ ಅವಧಿಯಲ್ಲಿ 292 ಬಾರಿ ವೀಕ್ಷಿಸಿದ್ದಾರೆ.
ರಾಮಿರೊ ಅಲಾನಿಸ್ ಅವರು ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಅನ್ನು 16 ಡಿಸೆಂಬರ್ 2021 ಮತ್ತು 15 ಮಾರ್ಚ್ 2022 ರ ನಡುವೆ 292 ಬಾರಿ ವೀಕ್ಷಿಸಿದ್ದಾರೆ. ರಾಮಿರೋ ಈ ದೊಡ್ಡ ಸಾಧನೆಯನ್ನು ಸಾಧಿಸಿರುವುದು ಇದೇ ಮೊದಲಲ್ಲ. ಅವರು ಈ ಹಿಂದೆ 2019 ರಲ್ಲಿ ಅವೆಂಜರ್ಸ್: ಎಂಡ್‌ಗೇಮ್ ಅನ್ನು 191 ಬಾರಿ ವೀಕ್ಷಿಸುವುದರೊಂದಿಗೆ ದಾಖಲೆ ಮಾಡಿದ್ದರು. ಆ ದಾಖಲೆಯನ್ನು 2021 ರಲ್ಲಿ ಅರ್ನಾಡ್ ಕ್ಲೈನ್ ಎಂಬುವವರು ಮುರಿದಿದ್ದರು.
ಈ ಬಾರಿ ರಾಮಿರೊ ತನ್ನ ಅಜ್ಜಿ ಜುವಾನಿ ಗೌರವಾರ್ಥವಾಗಿ ಮತ್ತೊಮ್ಮೆ ದಾಖಲೆ ಮಾಡಲು ಪ್ರಯತ್ನಿಸಿದ್ದಾರೆ. ಸ್ಪೈಡರ್‌ಮ್ಯಾನ್ ಚಲನಚಿತ್ರವನ್ನು ಥಿಯೇಟರ್‌ಗಳು ತೋರಿಸುವುದನ್ನು ನಿಲ್ಲಿಸುವವರೆಗೂ ಅವರು ಬ್ಯಾಕ್-ಟು-ಬ್ಯಾಕ್ ಪ್ರದರ್ಶನಗಳನ್ನು ವೀಕ್ಷಿಸಿದ್ದಾರೆ. ಅವರು ಪ್ರತಿದಿನ ಚಲನಚಿತ್ರಮಂದಿರದಲ್ಲಿ ಐದು ಪ್ರದರ್ಶನಗಳನ್ನು ವೀಕ್ಷಿಸಿದ್ದರು.