ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಅಂತರ್ಜಾಲದಲ್ಲಿ ಬಿರುಗಾಳಿಯೆಬ್ಬಿಸಿವೆ. ದಿನಂಪ್ರತಿ ಮದುವೆಯ ವೈರಲ್ ವಿಡಿಯೋಗಳು ಇಂಟರ್ನೆಟ್ ನಲ್ಲಿ ಸದ್ದು ಮಾಡುತ್ತಿವೆ. ಎಲ್ಲರಿಗೂ ತಿಳಿದಿರುವಂತೆ ಭಾರತೀಯ ವಿವಾಹ ಕಾರ್ಯಕ್ರಮ ಸಾಮಾನ್ಯವಾಗಿ ಹಲವಾರು ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ. ಇದರಲ್ಲಿ ಮೋಜು-ಮಸ್ತಿ, ನಗು, ತಮಾಷೆಯೂ ಇರುತ್ತದೆ. ಇದೀಗ ಇಂಥದ್ದೇ ವಿಡಿಯೋವೊಂದು ವೈರಲ್ ಆಗಿದೆ.
ಹೌದು, ವಧು-ವರ ಮಂಟಪದಲ್ಲಿ ಕುಳಿತು ಧಾರ್ಮಿಕ ಆಚರಣೆಗಳನ್ನು ಮಾಡುತ್ತಿರಬೇಕಾದ್ರೆ, ಪಂಡಿತರು ವರನಿಗೆ ಮಾದಕತೆ (ಅಮಲಿನ) ಬಗ್ಗೆ ತಮಾಷೆಯಾಗಿ ಪ್ರಶ್ನೆ ಕೇಳುತ್ತಾರೆ. ವರನ ಬಳಿ ಪಂಡಿತರು ಅತಿದೊಡ್ಡ ಅಮಲು ಯಾವುದು ಅಂತಾ ಕೇಳುತ್ತಾರೆ. ಈ ಪ್ರಶ್ನೆಗೆ ಸ್ವಲ್ಪವೂ ಯೋಚನೆ ಮಾಡದ ವರ ಊಟ ಅಂತಾ ಉತ್ತರಿಸುತ್ತಾನೆ. ವರನ ಉತ್ತರಕ್ಕೆ ವಧು ಸೇರಿದಂತೆ ಅಲ್ಲಿದ್ದವರೆಲ್ಲಾ ಗೊಳ್ಳನೆ ನಕ್ಕಿದ್ದಾರೆ.
ಮಕ್ಕಳ ಶೀತ-ಕೆಮ್ಮಿಗೆ ಇಲ್ಲಿದೆ ಸಿಂಪಲ್ ಮನೆ ಮದ್ದು
ಕಲ್ಯಾಣಿ ಲೈಫ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಹಾಸ್ಯ ಚಟಾಕಿ ಹಾರಿಸಿದ್ದಾರೆ.