
ಅಮ್ಮಂದಿರಿಗೆ ಮನೆಯವರೆಲ್ಲ ಖುಷಿಯಿಂದ, ನಾಲಿಗೆ ಚಪ್ಪರಿಸಿ ತಿನ್ನೋ ಹಾಗೆ ಏನಾದ್ರೂ ಮಾಡಬೇಕು ಅಂತ ಯಾವಾಗ್ಲೂ ಅನ್ನಿಸತ್ತೆ. ಹಾಗಾಗಿ ಅಡುಗೆ ಮನೆಯಲ್ಲಿ ಹೊಸ ಹೊಸ ಪ್ರಯೋಗ ನಡೆಯೋದು ಸಾಮಾನ್ಯ.
ಆಹಾರ ಆಕರ್ಷಣೀಯವಾಗಿ ಇರಬೇಕು ಅಂತ ಕೃತಕ ಬಣ್ಣಗಳನ್ನ ಸೇರಿಸುವುದು ಆರೋಗ್ಯದ ವಿಷಯದಲ್ಲಿ ಒಳ್ಳೆಯದಲ್ಲ. ಹಣ್ಣು ತರಕಾರಿಯಲ್ಲಿ ಸಹಜವಾಗಿ ಸಿಗುವ ಬಣ್ಣಗಳನ್ನೇ ಬಳಸಬಹುದು.
ಬೀಟ್ರೂಟ್, ಪಾಲಾಕ್ ಸೊಪ್ಪು, ಶಂಖ ಪುಷ್ಪ, ಕ್ಯಾರೆಟ್, ಕೇಸರಿ, ಅರಿಶಿನ ಇವುಗಳನ್ನೇ ಬಳಸಿ ನೀವು ಮಾಡುವ ಆಹಾರಕ್ಕೆ ಬಣ್ಣ ತರಬಹುದು. ಖಾದ್ಯಕ್ಕೆ ಬಳಸಬಹುದಾದ ಬಣ್ಣಗಳು ಸಾಕಷ್ಟು ಮಾರುಕಟ್ಟೆಯಲ್ಲಿ ಸಿಕ್ಕರೂ ಇವು ಅಷ್ಟು ಸುರಕ್ಷಿತವಲ್ಲ.
ರಾಸಾಯನಿಕ ಮಿಶ್ರಿತ ಬಣ್ಣಗಳ ಬಳಕೆ ಮಾಡಿ ಆರೋಗ್ಯಕ್ಕೆ ಹಾನಿ ಮಾಡಿಕೊಳ್ಳುವುದಕ್ಕಿಂತ ನೈಸರ್ಗಿಕ ಬಣ್ಣಗಳನ್ನು ಬಳಸಿ ಆಹಾರವನ್ನು ಖುಷಿಯಿಂದ ಚಪ್ಪರಿಸುವುದು ಜಾಣತನ ಅಲ್ಲವೇ ?